ಟಿ20 ವಿಶ್ವಕಪ್: ಇಂದು ಭಾರತ – ಬಾಂಗ್ಲಾ ನಡುವಣ ಅಭ್ಯಾಸ ಪಂದ್ಯ

ನಾಳೆಯಿಂದ T20 ವಿಶ್ವಕಪ್ ಆರಂಭವಾಗಲಿದ್ದು, ಸುಮಾರು 20 ರಾಷ್ಟ್ರಗಳು ಈ ಬಾರಿ ಸ್ಪರ್ಧಿಸಲು ಸಜ್ಜಾಗಿವೆ. ಎಮ್ ಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ T20 ವಿಶ್ವಕಪ್ ಗೆದ್ದು  ಸುಮಾರು ವರ್ಷಗಳೇ ಕಳೆದಿವೆ. ಈ ಬಾರಿಯಾದರೂ ಭಾರತ ತಂಡ ವಿಶ್ವ ಕಪ್ ಕಿರೀಟ ಎತ್ತಿ ಹಿಡಿಯಲಿದೆಯಾ  ಕಾದುನೋಡಬೇಕಾಗಿದೆ.

ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ 15 ನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಟಿ20 ವಿಶ್ವಕಪ್ ನಲ್ಲಿ ಐದೈದು ತಂಡಗಳ ಒಂದು ಗ್ರೂಪ್ ಮಾಡಲಾಗಿದ್ದು, ಭಾರತ ತಂಡ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ ತಂಡ ಗ್ರೂಪ್ ಡಿ ನಲ್ಲಿದೆ. ಏಷ್ಯಾ ಕಪ್ ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಹಲವಾರು ಪಂದ್ಯಗಳು ರೋಚಕತೆಯಿಂದ ಸಾಗಿವೆ. ಇಂದಿನ ಅಭ್ಯಾಸ ಪಂದ್ಯ ಕೂಡ ಭರ್ಜರಿ ಮನರಂಜನೆ ನೀಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read