11 ವರ್ಷವಾದರೂ ಶಾಲೆಗೆ ಡೈಪರ್‌ನಲ್ಲೇ ಬರುವ ಮಕ್ಕಳು….! ಸ್ವಿಜರ್ಲ್ಯಾಂಡ್ ಶಿಕ್ಷಕರಿಗೆ ತಲೆಬಿಸಿ

ಪ್ರಾಥಮಿಕ ಶಾಲಾ ಹಂತಕ್ಕೆ ಬರುವ ಮಕ್ಕಳೂ ಸಹ ಡೈಪರ್‌ ಬಳಸುವ ಅಭ್ಯಾಸ ಬಿಡದೇ ಇರುವ ವಿಚಾರ ಸ್ವಿಜ಼ರ್ಲೆಂಡ್‌ನ ಶಾಲಾ ಶಿಕ್ಷಕರಿಗೆ ಭಾರೀ ತಲೆ ನೋವು ತಂದಿದೆ.

“ನಾಲ್ಕು ವರ್ಷಕ್ಕೆಲ್ಲಾ ಮಕ್ಕಳು ಶಾಲೆಗೆ ಹೋಗಲು ಆರಂಭಿಸುತ್ತಾರೆ. ಹೀಗಾಗಿ ಅವರಲ್ಲಿ ಕೆಲವರು ಡೈಪರ್‌ ಧರಿಸಿ ಬರುವುದು ಸಹಜವೇ. ಆದರೆ 11 ವರ್ಷದ ಮಕ್ಕಳು ಶಾಲೆಗೆ ಡೈಪರ್‌ ಧರಿಸಿ ಬರುವುದು ಭಾರೀ ಚಿಂತನಾರ್ಹ ವಿಚಾರ,” ಎಂದು ಸ್ವಿಸ್ ಶಿಕ್ಷಕರ ಒಕ್ಕೂಟದ ಮುಖ್ಯಸ್ಥೆ ಡಗ್ಮಾರ್‌ ರಾಸ್ಲರ್‌ ತಿಳಿಸಿದ್ದಾರೆ.

ಈ ವಿಚಾರ ಮಾನಸಿಕ ಅಭಿವೃದ್ಧಿಗೆ ಸಂಬಂಧಿಸಿದ್ದೋ ಅಥವಾ ವಯಸ್ಸಿಗನುಗುಣವಾಗಿ ಕಲಿಯದೇ ಇರುವ ಕಾರಣದಿಂದಾಗುತ್ತಿರುವ ಪ್ರಾರಬ್ಧವೋ ಎಂಬುದನ್ನು ಮೊದಲು ಕಂಡುಕೊಳ್ಳಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಒಂದು ವೇಳೆ ಇದು ದೈಹಿಕ ಸಮಸ್ಯೆ ಏನಾದರೂ ಆಗಿದ್ದಲ್ಲಿ, ಒತ್ತಡಭರಿತ ಕೌಟುಂಬಿಕ ನಿರ್ವಹಣೆಯ ಪರಿಣಾಮ ಇದು ಎನ್ನಬಹುದಾಗಿದೆ. ಈ ವಿಚಾರವಾಗಿ ಮಕ್ಕಳ ಹೆತ್ತವರೊಂದಿಗೆ ಮಾತನಾಡಿ, ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆಂದು ಅವರಿಗೆ ಮನದಟ್ಟು ಮಾಡಬೇಕಾಗಿದೆ,” ಎಂದು ಮನಶಾಸ್ತ್ರಜ್ಞ ಫೆಲಿಕ್ಸ್ ಹಾಫ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read