ಹಗುರ ಟ್ರಾಕ್ಟರ್‌ ಬಿಡುಗಡೆ ಮಾಡಿದ ‘ಸ್ವರಾಜ್’; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

Swaraj Tractors launches new range of compact lightweight tractors; price starts from Rs 5.35 lakh

ನವದೆಹಲಿ: ಸ್ವರಾಜ್ ಟ್ರಾಕ್ಟರ್ಸ್ ಹೊಸ ಶ್ರೇಣಿಯ ಕಾಂಪ್ಯಾಕ್ಟ್ ಹಗುರವಾದ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ರೂ. 5.35 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಹೊಸ ಶ್ರೇಣಿಯ ಅಡಿಯಲ್ಲಿ 20-30 ಎಚ್‌ಪಿ ವಿಭಾಗದಲ್ಲಿ ಟಾರ್ಗೆಟ್ 630 ಮತ್ತು ಟಾರ್ಗೆಟ್ 625 ಎಂಬ ಎರಡು ಮಾದರಿಗಳನ್ನು ಹೊರತರುವುದಾಗಿ ಕಂಪನಿ ಹೇಳಿದೆ.

ಸ್ವರಾಜ್ ಟಾರ್ಗೆಟ್ 630 ಮಾದರಿಯು ಮೊದಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅದರ ಡೀಲರ್ ನೆಟ್‌ವರ್ಕ್ ಮೂಲಕ ಲಭ್ಯವಿರುತ್ತದೆ, ಬೆಲೆ ರೂ. 5.35 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

ಎರಡನೇ ಮಾದರಿಯ ಟಾರ್ಗೆಟ್ 625 ಅನ್ನು ಸರಿಯಾದ ಸಮಯದಲ್ಲಿ ಪರಿಚಯಿಸಲಾಗುವುದು ಎಂದು ಮಹೀಂದ್ರಾ ಸಮೂಹದ ಭಾಗವಾಗಿರುವ ಸ್ವರಾಜ್ ಟ್ರ್ಯಾಕ್ಟರ್ಸ್ ತಿಳಿಸಿದೆ. ಗ್ರೂಪ್ ಕಳೆದ ವಾರ ಹೊಸ ಟ್ರಾಕ್ಟರ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವ ಯೋಜನೆಯನ್ನು ಕಂಪೆನಿ ಪ್ರಕಟಿಸಿತ್ತು.

ಹೊಸ ಸ್ವರಾಜ್ ಟಾರ್ಗೆಟ್ ಶ್ರೇಣಿಯು ಶಕ್ತಿ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಹೊಂದಿದೆ. ಹಲವಾರು ವಿಶಿಷ್ಠ ಅಪ್ಲಿಕೇಶನ್‌ಗಳಲ್ಲಿ ಅಸಾಧಾರಣ ದಕ್ಷತೆಯನ್ನು ಒದಗಿಸುತ್ತದೆ ಎಂದು ಕಂಪೆನಿ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read