2ಡಿ ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಸಮುದಾಯ: 2ಎ ಮೀಸಲಾತಿಗೆ ಹೋರಾಟ

ಬೆಳಗಾವಿ: ಲಿಂಗಾಯಿತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ 2ಡಿ ಮೀಸಲಾತಿ ಘೋಷಿಸಿದ್ದು, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ನಿರ್ಣಯ ಕೈಗೊಂಡಿರುವುದಾಗಿ ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಅಥವಾ ಅದಕ್ಕೆ ಸಮಾನದ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳು 24ಗಂಟೆಯೊಳಗೆ ಸ್ಪಷ್ಟಪಡಿಸಬೇಕು. ಜನವರಿ 12ರೊಳಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದರೆ ಜನವರಿ 13ರಂದು ಶಿಗ್ಗಾಂವಿಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನೀಡಿದ 2ಡಿ ಮೀಸಲಾತಿಯಲ್ಲಿ ಗೊಂದಲವಿದ್ದು, ನಮ್ಮ ಸಮಾಜಕ್ಕೆ ಎಷ್ಟು ಮೀಸಲಾತಿ ಸಿಗುತ್ತದೆ? 2ಎ ಗೆ ಸರಿಸಮನಾದ ಮೀಸಲಾತಿ ನೀಡಲಾಗಿದೆಯೇ ಎಂಬುದರ ಸ್ಪಷ್ಟತೆ ಇಲ್ಲವಾಗಿದೆ. ಹಾಗಾಗಿ, ಅದನ್ನು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read