ದಿನ 8 ಕೆಜಿ ಮಟನ್ ತಿಂತೀರಾ ಫಿಟ್ನೆಸ್ ಎಲ್ಲಿ…? ಪಾಕಿಸ್ತಾನ ಹೀನಾಯ ಸೋಲಿನ ನಂತರ ವಾಸಿಂ ಅಕ್ರಮ್ ವಾಗ್ದಾಳಿ

ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ಪಾಕಿಸ್ತಾನ ತಂಡವನ್ನು ಮಾಜಿ ಆಟಗಾರ ವಾಸಿಮ್ ಅಕ್ರಂ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ್ದ ಪಾಕಿಸ್ತಾನ ನಂತರ ಮೂರು ಪಂದ್ಯಗಳನ್ನು ಸೋತಿದೆ. ಕಳಪೆ ಫೀಲ್ಡಿಂಗ್, ಬೌಲಿಂಗ್, ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಪಾಕಿಸ್ತಾನ ತಂಡ ಸತತ ವೈಫಲ್ಯ ಕಂಡಿದ್ದು, ಆಟಗಾರರ ಫಿಟ್ನೆಸ್ ಬಗ್ಗೆ ವಾಸಿಂ ಅಕ್ರಮ್ ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ.

ಆಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿರುವುದು ಪಾಕಿಸ್ತಾನಕ್ಕೆ ಮುಜುಗರ ತಂದಿದೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ ವಾಸಿಂ ಅಕ್ರಮ್ ಹೇಳಿದ್ದಾರೆ. ಪಾಕಿಸ್ತಾನ ಆಟಗಾರರ ಫಿಟ್ನೆಸ್ ಮಟ್ಟವನ್ನು ಗಮನಿಸಿದಾಗ ಅವರು ಕಳೆದ ಎರಡು ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಿಲ್ಲ. ನಾನು ವೈಯಕ್ತಿಕವಾಗಿ ಯಾರ ಹೆಸರನ್ನು ಹೇಳಲು ಬಯಸುವುದಿಲ್ಲ. ನಾನು ಆ ರೀತಿ ಹೇಳಿದರೆ ಅವರ ಮುಖಗಳು ಬಾಡುತ್ತವೆ. ಆಟಗಾರರು ಪ್ರತಿದಿನ ಎಂಟು ಕೆಜಿ ಮಟನ್ ತಿನ್ನುತ್ತಿದ್ದಾರೆ. ಅದಕ್ಕೆ ತಕ್ಕಂತೆ ಫಿಟ್ನೆಸ್ ಸಾಬೀತು ಮಾಡಬೇಕಲ್ಲವೇ ಎಂದು ಹೇಳಿದ್ದಾರೆ.

ಆಟಗಾರರನ್ನು ಪರೀಕ್ಷೆಗೆ ಒಳಪಡಿಸಬೇಕು. ವೈಯಕ್ತಿಕ ಹಿತಾಸಕ್ತಿಗೆ ಆಟವಾಡದೇ ನಿರ್ದಿಷ್ಟ ಮಾನದಂಡದೊಂದಿಗೆ ದೇಶಕ್ಕಾಗಿ ಆಟವಾಡಬೇಕು. ಫೀಲ್ಡಿಂಗ್ ಯಾವಾಗಲೂ ಆಟಗಾರರ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

https://twitter.com/CrikTour/status/1716532121446301836

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read