ಸುಜುಕಿ ಇಂಡಿಯಾದ ಹೊಸ ಶ್ರೇಣಿಗಳ ಬಿಡುಗಡೆ; ಇಲ್ಲಿದೆ ಇವುಗಳ ವಿಶೇಷತೆ

ಸುಜುಕಿ ಇಂಡಿಯಾ E-20 ಕಂಪ್ಲೈಂಟ್ ವಿ-ಸ್ಟಾರ್ಮ್​ (V-Strom) ಎಸ್​ಎಕ್ಸ್​ (SX) ಮತ್ತು ಗಿಕ್ಸರ್​ 250 (Gixxer 250)ಸರಣಿ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್​ ಬಿಡುಗಡೆ ಮಾಡಿದೆ. ಸುಜುಕಿಯ ಎಲ್ಲಾ ದೇಶೀಯ ದ್ವಿಚಕ್ರ ವಾಹನ ಉತ್ಪನ್ನಗಳು ಶೇಕಡಾ 20ರವರೆಗೆ ಎಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕಂಪೆನಿ ಹೇಳಿದೆ.

ಪ್ರಸ್ತುತ, ಕಂಪೆನಿಯು ಇತ್ತೀಚೆಗೆ ಬಿಡುಗಡೆಯಾದ E20-ಕಂಪ್ಲೈಂಟ್ Gixxer ಸರಣಿ, ಆಕ್ಸೆಸ್ 125, ಅವೆನಿಸ್ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಅನ್ನು ಅದರ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ಇದೇ ತಿಂಗಳ 3 ನೇ ವಾರದಿಂದ, ಈ ಎಲ್ಲಾ ಸುಜುಕಿ ಪ್ರೀಮಿಯಂ ಡೀಲರ್‌ಶಿಪ್‌ಗಳಲ್ಲಿ ಮಾರಾಟ ಮಾಡಲಿದೆ.

ಈ ಸ್ಕೂಟರ್​ಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇವಶಿಶ್ ಹಂಡಾ, “ಭಾರತ ಸರ್ಕಾರ ನೀಡಿರುವ ಅವಧಿಗಿಂತಲೂ ಮೊದಲೇ ಈ ದ್ವಿಚಕ್ರ ವಾಹನಗಳು ಮುಂಚೂಣಿಗೆ ಬಂದಿವೆ. ನಾವು ನಮ್ಮ ಗ್ರಾಹಕರ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುವುದನ್ನು ಮುಂದುವರೆಸುತ್ತೇವೆ, ಜವಾಬ್ದಾರಿಯುತ ಕಂಪನಿಯಾಗಿ ನಾವು ಸ್ವಚ್ಛ ಮತ್ತು ಹಸಿರು ನಾಳೆಗಾಗಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಬದ್ಧರಾಗಿದ್ದೇವೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read