ಶಾಲಾ ಪ್ರವಾಸಕ್ಕೆಂದು ಸುವರ್ಣಸೌಧಕ್ಕೆ ಬಂದ ಮಕ್ಕಳಿಗೆ ಗೈಡ್ ಆದ ಸಿಎಂ ಸಿದ್ಧರಾಮಯ್ಯ: ಅನುಭವ ಮಂಟಪದ ಬಗ್ಗೆ ವಿವರಣೆ

ಬೆಳಗಾವಿ: ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿವರಿಸಿದ್ದಾರೆ.

ಅಂದು ಶರಣರು ಸಾರಿದ ಸಮಾನತೆ, ಜಾತ್ಯತೀತತೆ, ಸಹಬಾಳ್ವೆ, ವ್ಯಕ್ತಿ ಸ್ವಾತಂತ್ರ್ಯ‌ ಘನತೆಯ ಬದುಕಿನ ಹಕ್ಕುಗಳು ಇಂದು ನಮ್ಮ ಸಂವಿಧಾನದ ಆಶಯಗಳಾಗಿವೆ. ಇವು ಪ್ರತಿಯೊಬ್ಬರ ಆಶಯಗಳಾಗಬೇಕು. ವಿಶ್ವಮಾನವರಾಗಿ ಹುಟ್ಟುವ ಮಕ್ಕಳು ಜಾತಿ, ಧರ್ಮ, ವರ್ಣ, ಕಂದಾಚಾರ ಮುಂತಾದ ಸಂಕುಚಿತ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ಅಲ್ಪಮಾನವರಾಗುತ್ತಿದ್ದಾರೆ. ಮಹಾಪುರುಷರ ಜೀವನಾದರ್ಶಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸುವ ಮೂಲಕ ಅವರನ್ನು ಈ ಜಾತಿ, ಧರ್ಮ, ಮೂಢನಂಬಿಕೆಗಳ ಅಲ್ಪತನದಿಂದ ಮುಕ್ತಗೊಳಿಸಿ ವಿಶ್ವಮಾನವರನ್ನಾಗಿಸೋಣ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read