ಭೋಪಾಲ್ನ ಸುಭಾಷ್ ನಗರ ಮೇಲ್ಸೇತುವೆ ಮೇಲೆ ನಡೆದ ಭೀಕರ ರಸ್ತೆ ಅಪಘಾತವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಎಸ್ಯುವಿಯೊಂದು ರಸ್ತೆ ಡಿವೈಡರ್ಗೆ ಅಪ್ಪಳಿಸಿ ಪಲ್ಟಿಯಾಗಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಎಸ್ಯುವಿಯ ಮುಂಭಾಗದ ಚಕ್ರಗಳು ಸಂಪೂರ್ಣವಾಗಿ ಕಳಚಿ ಬಿದ್ದಿದ್ದು, ಬಂಪರ್ ರಸ್ತೆಯ ಮೇಲೆ ದೂರಕ್ಕೆ ಎಸೆಯಲ್ಪಟ್ಟಿದೆ. ಈ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರು ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಸ್ಯುವಿ ಹಿಂದೆಯೇ ಬರುತ್ತಿದ್ದ ಬೈಕರ್ಗಳ ಕ್ಯಾಮೆರಾದಲ್ಲಿ ಈ ಅಪಘಾತದ ದೃಶ್ಯಗಳು ಸೆರೆಯಾಗಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ.
Who approved a divider that suddenly starts in the middle of the road? Total setup for disaster!!
— Nabila Jamal (@nabilajamal_) July 2, 2025
Engineer or authority responsible needs to be held accountable. This is criminal road design
*Speeding car slammed into a divider and overturned on #Bhopal's Subhashnagar flyover.… pic.twitter.com/WmFsBnjerB
भोपाल के सुभाष नगर ओवर ब्रिज पर तेज रफ़्तार गाड़ी पलटी pic.twitter.com/pD1T5kwSw2
— Nitendra Sharma (@nitendrasharma2) July 2, 2025