‘ಸೂತ್ರಧಾರಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ಕಿರಣ್ ಕುಮಾರ್ ನಿರ್ದೇಶನದ ‘ಸೂತ್ರಧಾರಿ’ ಚಿತ್ರದ  ವಿಡಿಯೋ ಹಾಡೊಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಮೂರು ಗಂಟೆಗಳಲ್ಲಿ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

‘ಏನ್ ಮಾಡ್ಬೇಕು’ ಎಂಬ ಈ ಹಾಡಿಗೆ  ಚಂದನ್ ಶೆಟ್ಟಿ ಅವರೇ ಸಂಗೀತ ನಿರ್ದೇಶನ ಮಾಡುವ ಮೂಲಕ  ಧ್ವನಿಯಾಗಿದ್ದು ನಿರ್ದೇಶಕ ಕಿರಣ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಪೂರ್ವ, ಸಂಜನಾ ಆನಂದ್, ಪ್ರಶಾಂತ್, ತಬಲ ನಾಣಿ ಸೇರಿದಂತೆ ಮೊದಲಾದ ತಾರಾ ಬಳಗವಿದೆ. ಈಗಲ್ ಮೀಡಿಯ ಕ್ರಿಯೇಶನ್ ಬ್ಯಾನರ್ ನಡಿ ನವರಸನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read