ಪತ್ನಿ ಮೇಲೆ ಡೌಟ್ ಪಟ್ಟು ‘ಡ್ರೋನ್ ಕ್ಯಾಮೆರಾ’ ಬಿಟ್ಟ ಪತಿರಾಯ ; ಬಾಸ್ ಜೊತೆ ಸಿಕ್ಕಿಬಿದ್ಲು ಹೆಂಡ್ತಿ..!

ಡಿಜಿಟಲ್ ಡೆಸ್ಕ್ : ಪತಿಯೋರ್ವ ತನ್ನ ಹೆಂಡತಿ ತನ್ನ ಬಾಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ, ಇದನ್ನು ಕಂಡುಹಿಡಿಯಲು ಡ್ರೋನ್ ಕ್ಯಾಮೆರಾ ಬಳಸಿದ ಘಟನೆ ಚೀನಾದಲ್ಲಿ ವರದಿಯಾಗಿದೆ.

ಮಧ್ಯ ಹುಬೈ ಪ್ರಾಂತ್ಯದ ಶಿಯಾನ್ನಲ್ಲಿ ವಾಸಿಸುವ 33 ವರ್ಷದ ವ್ಯಕ್ತಿ ತನ್ನ ಹೆಂಡತಿ ಜೊತೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದನು. ಆದರೆ ಬರು ಬರುತ್ತಾ ಪತ್ನಿಯ ನಡವಳಿಕೆ ಆತನಲ್ಲಿ ಅನುಮಾನಗಳನ್ನು ಸೃಷ್ಟಿಸಿತು. ತವರು ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗುವ ಪತ್ನಿ ಬೇರೆಲ್ಲೋ ಹೋಗುತ್ತಿದ್ದಳು. ತನ್ನ ಪತ್ನಿ ಹಾದಿ ತಪ್ಪಿದ್ದಾಳೆ, ಹೇಗಾದರೂ ಮಾಡಿ ಇದನ್ನು ಕಂಡು ಹಿಡಿಯಬೇಕು ಎಂದುಕೊಂಡ ಪತಿ ಕೊನೆಗೆ ಡ್ರೋನ್ ಕ್ಯಾಮೆರಾ ಮೊರೆ ಹೋಗುತ್ತಾನೆ.

ಅನುಮಾನದಿಂದ ದುಃಖಿತನಾದ ವ್ಯಕ್ತಿ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ನ್ನು ಬಳಸುತ್ತಾನೆ. ಒಂದು ದಿನ ಪತ್ನಿ ಹೊರಗಡೆ ಹೋದಾಗ ಆಕೆಯ ಹಿಂದೆ ಡ್ರೋನ್ ಕ್ಯಾಮೆರಾವನ್ನೂ ಟ್ರ್ಯಾಕ್ ಮಾಡುತ್ತಾನೆ. ಪತ್ನಿ ಕಾರಿನಲ್ಲಿ ಬೇರೊಬ್ಬ ಪುರುಷನ ಜೊತೆ ಗುಡ್ಡ ಪ್ರದೇಶಕ್ಕೆ ಹೋಗುವುದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸುಮಾರು 20 ನಿಮಿಷಗಳ ನಂತರ ಆಕೆ ಪುರುಷನ ಜೊತೆ ಗುಡಿಸಲಿನಿಂದ ಹೊರಬರುತ್ತಾಳೆ. ಹಾಗೂ ಅವಳು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಅದೇ ಪುರುಷನ ಜೊತೆ ಹೋಗುತ್ತಾಳೆ. ಆಗ ಪತಿಗೆ ತನ್ನ ಹೆಂಡತಿ ಬಾಸ್ ನ ಜೊತೆ ಸಂಪರ್ಕ ಹೊಂದಿದ್ದಾಳೆ ಎಂಬುದು ಗೊತ್ತಾಗುತ್ತದೆ.

ದಾಂಪತ್ಯ ದ್ರೋಹವನ್ನು ಬಹಿರಂಗಪಡಿಸುವಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read