ಬೆಂಗಳೂರು : ಬೆಂಗಳೂರಿನಲ್ಲಿ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿಯೋರ್ವ ಪತ್ನಿ ಶವದ ಜೊತೆ 2 ದಿನ ಕಾಲ ಕಳೆದಿದ್ದಾನೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಈ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಸುಮನಾ (22) ಎಂದು ಗುರುತಿಸಲಾಗಿದೆ. ಪತಿ ಶಿವಂ ಜೊತೆ ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸುಮನಾ ಕಳೆದ 3 ದಿನಗಳ ಹಿಂದಷ್ಟೇ ಮನೆಯಲ್ಲಿ ಮೃತಪಟ್ಟಿದ್ದರು . ಸುಮನಾ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಶವದ ದುರ್ವಾಸನೆ ಬಂದಾಗ ಸ್ಥಳೀಯರು ಗಮನಿಸಿದ್ದು, ನಂತರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಘಾತಕಾರಿ ವಿಚಾರ ಅಂದರೆ ಪತ್ನಿ ಮೃತದೇಹದ ಜೊತೆ ಈತ 2 ದಿನ ಕಾಲ ಕಳೆದಿದ್ದಾನೆ. ಪತ್ನಿ ಮೃತಪಟ್ಟ ಮೊದಲನೇ ದಿನ ಈತ ಕೆಲಸಕ್ಕೆ ಹೋಗಿದ್ದಾನೆ. 2 ನೇ ದಿನ ಪತ್ನಿ ಶವದ ಮುಂದೆ ಊಟ ಕೂಡ ಮಾಡಿದ್ದಾನೆ ಎನ್ನಲಾಗಿದೆ. ನಂತರ ಅಕ್ಕಪಕ್ಕದ ಮನೆಯವರು ಬಂದು ನೋಡುವಾಗ ಈತ ಎಸ್ಕೇಪ್ ಆಗಿದ್ದಾನೆ.ಸದ್ಯ ಪತಿ ಶಿವಂಗಾಗಿ ಹೆಣ್ಣೂರು ಪೊಲೀಸರು ಬಲೆ ಬೀಸಿದ್ದಾರೆ.
You Might Also Like
TAGGED:ಗರ್ಭಿಣಿ