ಬೆಳಗಾವಿ : ಕಾನ್ಸ್ಟೇಬಲ್ ಒಬ್ಬರು ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸವದತ್ತಿ ಪಟ್ಟಣದ ರಾಮಸೈಟ್ ನಲ್ಲಿ ಘಟನೆ ನಡೆದಿದೆ. 5 ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಶಮ್ಮ ನೆಲ್ಲಿಗಣ್ಣಿ ಎಂಬುವವರನ್ನು ಕೊಂದು ಪಿಸಿ ಸಂತೋಷ್ ಕಾಂಬಳೆ ಪರಾರಿಯಾಗಿದ್ದಾರೆ.
ಕಾಶಮ್ಮ ನೆಲ್ಲಿಗಣ್ಣಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆ ಬಳಿಕ ಪತ್ನಿಯನ್ನು ಅನುಮಾನಿಸುತ್ತಿದ್ದ ಸಂತೋಷ್ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದನು. ಇದರಿಂದ ಬೇಸತ್ತು ಕಾಶಮ್ಮ ಏ.5 ರಂದು ವಿಚ್ಚೇದನ ಪಡೆದಿದ್ದರು. ನಂತರ ಸವದತ್ತಿಗೆ ವರ್ಗಾವಣೆ ಆಗಿದ್ದರು. ಆದರೂ ಕಿರುಕುಳ ನಿಂತಿರಲಿಲ್ಲ. ಸಂತೋಷ್ ಪತ್ನಿಗೆ ಫೋನ್ ಮಾಡಿ ಬೈಯುತ್ತಿದ್ದರು. ಅ.13 ರಂದು ಕಾಶಮ್ಮ ಅವರಿದ್ದ ಜಾಗಕ್ಕೆ ಹೋಗಿ ಗಲಾಟೆ ಮಾಡಿ ಚಾಕು ಇರಿದು ಹತ್ಯೆಗೈದು ಪರಾರಿಯಾಗಿದ್ದಾರೆ. ಸದ್ಯ ಪರಾರಿಯಾಗಿರುವ ಕಾನ್ಸ್ಟೇಬಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.