BIG NEWS: ಅಮಾನತುಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಗೆ ಮುಖ್ಯಮಂತ್ರಿ ಪದಕ

ಮೈಸೂರು: ತಿಂಗಳ ಹಿಂದಷ್ಟೇ ಅಮಾನತುಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಓರ್ವರಿಗೆ ಮುಖ್ಯಮಂತ್ರಿ ಪದಕ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೈಸೂರು ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಸಲೀಂ ಪಾಷಾ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದಕ ಪಟ್ಟಿಗೆ ಶಿಫಾರಸು ಮಾಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಪದಕ ಪಟ್ಟಿಯಲ್ಲಿ ಸಲೀಂ ಪಾಷಾ ಹೆಸರಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಲೀಂ ಪಾಷಾ ಸಂಪರ್ಕ ಹೊಂದಿದ್ದರು. ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷವಾಗಿ ನೆರವಾಗಿದ್ದ ಆರೋಪದಲ್ಲಿ ಸಲಿಂ ಪಾಷಾ ಅಮಾನತ್ತಾಗಿದ್ದರು. ಆದರೆ ಈಗ ಸ್ವಾತಂತ್ರ್ಯೋತ್ಸವದಂದು ನೀಡಲಾಗುವ ಮುಖ್ಯಮಂತ್ರಿ ಪದಕ ಪಟ್ಟಿಯಲ್ಲಿ ಸಸ್ಪೆಂಡ್ ಆಗಿರುವ ಸಲೀಂ ಪಾಷಾ ಹೆಸರಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

78ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ರಾಜ್ಯದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023ರನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಚ್ ಸಿ ಸಲೀಂ ಪಾಷಾ ಅವರುಗೂ ಪದಕ ನೀಡಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read