Suryayaan : ಇಂದು ಬೆಳಗ್ಗೆ 11.50 ಕ್ಕೆ `ಆದಿತ್ಯ ಎಲ್-1’ ಉಡಾವಣೆ : ಈ ಲಿಂಕ್ ಕ್ಲಿಕ್ ಮಾಡಿ ಲೈವ್ ವೀಕ್ಷಿಸಿ..!

ಬೆಂಗಳೂರು : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರ ಇಂದು ಬೆಳಗ್ಗೆ 11.50 ಕ್ಕೆ ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.

ಇಸ್ರೋ ಈಗಾಗಲೇ ಆದಿತ್ಯ-ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯೆ ಅಧ್ಯಯನಕ್ಕೆ ಮುಂದಾಗಿದ್ದು, ಇಂದು ಆದಿತ್ಯ ಎಲ್-1 ನೌಕೆ ಉಡಾವಣೆ ನಡೆಸಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಉಪಗ್ರಹವನ್ನು ಸೆಪ್ಟೆಂಬರ್ 2ರ ನಾಳೆ ಬೆಳಗ್ಗೆ 11.50 ಕ್ಕೆ ಇಸ್ರೋದ ಪಿಎಸ್ಎಲ್ ವಿ ಸಿ 57 ಉಡಾವಣಾ ನೌಕೆಯು ಗಗನದತ್ತ ಹೊತ್ತು ಸಾಗಲಿದೆ.

ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಸೆಪ್ಟೆಂಬರ್ 2, 2023 ರಂದು ಭಾರತೀಯ ಕಾಲಮಾನ 11:50 ಗಂಟೆಗೆ ಸೂರ್ಯಯಾನ ಆದಿತ್ಯ ಎಲ್-1 ನೌಕೆ ಉಡಾವಣೆಯಾಗಲಿದ್ದು, ಲೈವ್ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ಉಡಾವಣೆಯನ್ನು ಲೈವ್ ನಲ್ಲಿ ವೀಕ್ಷಿಸಬಹುದು

ಇಸ್ರೋ ವೆಬ್ ಸೈಟ್ ನಲ್ಲಿ https://isro.gov.in

ಫೇಸ್ ಬುಕ್ https://facebook.com/ISRO

ಯೂಟ್ಯೂಬ್ https://youtube.com/watch?v=_IcgGYZTXQw

ಡಿಡಿ ನ್ಯಾಷನಲ್ ಟಿವಿ ಚಾನೆಲ್

ಭಾರತೀಯ ಕಾಲಮಾನ 11:20 ಗಂಟೆಯಿಂದ ನೇರ ಪ್ರಸಾರ ಇರಲಿದೆ.

ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸೌರ ಕರೋನದ ದೂರಸ್ಥ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1 ಪಾಯಿಂಟ್ 5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎಲ್ 1(ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ಸಿತು ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನ ವೀಕ್ಷಣೆಗಾಗಿ ನಿರ್ಮಿಸಿರುವ ಮೊದಲ ಮೀಸಲಾದ ಬಾಹ್ಯಾಕಾಶ ಕಾರ್ಯಾಚರಣೆ ಇದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read