ಬೆಂಗಳೂರಿನಲ್ಲಿ ಶೇ 16ರಷ್ಟು ವೃದ್ಧೆಯರಿಗೆ ಕುಟುಂಬಸ್ಥರಿಂದ ದೌರ್ಜನ್ಯ: ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ಬೆಂಗಳೂರು: ಬೆಂಗಳೂರಿನಲ್ಲಿ ವೃದ್ಧ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶೇ 16ರಷ್ಟು ವೃದ್ಧ ಮಹಿಳೆಯರು, ಮಕ್ಕಳು ಮತ್ತು ಸೊಸೆಯಂದಿರು ಹಾಗೂ ಸಂಬಂಧಿಕರಿಂದ ನಿಂದನೆಗೆ ಒಳಾಗುತ್ತಿದ್ದಾರೆ ಎಂದು ‘ಹೆಲ್ಪ್‌ಏಜ್‌ ಇಂಡಿಯಾ ಸಂಸ್ಥೆ ವರದಿ ತಿಳಿಸಿದೆ.

ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಇದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

60ರಿಂದ 90 ವಯೋಮಾನದ 7,911 ಮಹಿಳೆಯರ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ಸೇರಿದಂತೆ 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ 578 ವೃದ್ಧ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ವಿಶ್ವದ 6 ಹಿರಿಯರಲ್ಲಿ ಒಬ್ಬ ವಯೋವೃದ್ಧರು ನಿಂದನೆಗೊಳಗಾಗುತ್ತಾರೆ. ಇದರಲ್ಲಿ ಬೆಂಗಳೂರಿನ ಬಗ್ಗೆಯೂ ವರದಿ ನೀಡಲಾಗಿದೆ.

ವೃದ್ಧ ಮಹಿಳೆಯರು ಮಕ್ಕಳಿಂದ ಶೇ 40ರಷ್ಟು ಮತ್ತು ಸೊಸೆಯಿಂದ ಶೇ 27ರಷ್ಟು ಹಾಗೂ ಸಂಬಂಧಿಕರಿಂದ ಶೇ 31ರಷ್ಟು ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ಭಯದಿಂದಾಗಿ ಬಹುತೇಕ ಮಹಿಳೆಯರು ಪೊಲೀಸರಿಗೆ ದೂರು ಸಲ್ಲಿಸುತ್ತಿಲ್ಲ ಎಂದು ವರದಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read