BIG NEWS: ಈ ಬಾರಿ ಯಾರಿಗೂ ಬಹುಮತ ಇಲ್ಲ: ಅತಂತ್ರ ವಿಧಾನಸಭೆ; ‘ಜನ್ ಕೀ ಬಾತ್’ ಸಮೀಕ್ಷೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಜನ್ ಕೀ ಬಾತ್ ಸಮೀಕ್ಷೆ ತಿಳಿಸಿದೆ.

ವಿಧಾನಸಭೆಯಲ್ಲಿ 224 ಸ್ಥಾನಗಳಿದ್ದು, ಬಹುಮತಕ್ಕೆ 113 ಸ್ಥಾನಗಳು ಬೇಕಿದೆ. ಜನ್ ಕೀ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿ 98 ರಿಂದ 109, ಕಾಂಗ್ರೆಸ್ 89 ರಿಂದ 97, ಜೆಡಿಎಸ್ 25 ರಿಂದ 29, ಇತರರು ಒಂದು ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಮಾರ್ಚ್ 15 ರಿಂದ ಏಪ್ರಿಲ್ 11ರ ವರೆಗೆ ರಾಜ್ಯದ್ಯಂತ ಸಮೀಕ್ಷೆ ನಡೆಸಲಾಗಿದೆ.

ಹಾಲಿ 120 ಶಾಸಕರನ್ನು ಹೊಂದಿರುವ ಬಿಜೆಪಿಗೆ 11 ರಿಂದ 22 ಸ್ಥಾನ ನಷ್ಟವಾಗಲಿದೆ. ಆದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಪಕ್ಷಕ್ಕೆ 20 ರಿಂದ 28 ಹೆಚ್ಚು ಸ್ಥಾನ ಲಭಿಸಲಿದ್ದು, ಎರಡನೇ ದೊಡ್ಡ ಪಕ್ಷವಾಗಲಿದೆ. ಜೆಡಿಎಸ್ ಪಕ್ಷಕ್ಕೆ 3 -7 ಸ್ಥಾನ ಕುಸಿತವಾಗಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದರೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read