ಫಿಟ್ನೆಸ್ ಉತ್ತೇಜಿಸಲು ವರ್ಣರಂಜಿತ ಸೀರೆ ಧರಿಸಿ ‘ಸಾರಿ ವಾಕಥಾನ್’ನಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿ

ಸೂರತ್: ಗುಜರಾತ್ ನ ಸೂರತ್ ನಲ್ಲಿ ಫಿಟ್ನೆಸ್ ಉತ್ತೇಜಿಸಲು 15,000 ಕ್ಕೂ ಹೆಚ್ಚು ಮಹಿಳೆಯರು ‘ಸಾರಿ ವಾಕಥಾನ್’ ನಲ್ಲಿ ಭಾಗವಹಿಸಿದ್ದಾರೆ.

ಫಿಟ್ ಆಗಿರಲು ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, 15,000 ಕ್ಕೂ ಹೆಚ್ಚು ಮಹಿಳೆಯರು ವರ್ಣರಂಜಿತ ಸೀರೆಗಳನ್ನು ಧರಿಸಿ ಭಾನುವಾರ ಭಾರತದ ಜವಳಿ ಕೇಂದ್ರದಲ್ಲಿ ‘ಸಾರಿ ವಾಕಥಾನ್’ ನಲ್ಲಿ ಭಾಗವಹಿಸಿದ್ದರು.

ಸೂರತ್ ಭಾರತದ ಜವಳಿ ಕೇಂದ್ರವಾಗಿದ್ದು, ಮಿನಿ ಇಂಡಿಯಾ ಎಂದು ಕರೆಯಲಾಗುತ್ತದೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸೂರತ್ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ ಲಿಮಿಟೆಡ್ ಜಂಟಿಯಾಗಿ ಆಯೋಜಿಸಿದ್ದ ಸೀರೆ ವಾಕಥಾನ್‌ ನಲ್ಲಿ ವಿವಿಧ ಪ್ರಾಂತ್ಯಗಳ ಮಹಿಳೆಯರು ಭಾಗವಹಿಸಿದ್ದರು.

ಇವರೊಂದಿಗೆ ವಿದೇಶದಿಂದ ಸೂರತ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ದೇಶಗಳ ವಿದ್ಯಾರ್ಥಿಗಳೂ ಭಾರತೀಯ ಸಾಂಪ್ರದಾಯಿಕ ಉಡುಗೆಗಳು ಮತ್ತು ಸೀರೆಗಳನ್ನು ಧರಿಸಿ ನಡೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ಗುಜರಾತಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read