ಪತ್ನಿ ವಿರುದ್ಧವೇ ಅತ್ಯಾಚಾರ ಆರೋಪ: ಕೋರ್ಟ್ ಮೆಟ್ಟಿಲೇರಿದ ಪತಿರಾಯ

ಸೂರತ್: ಪತ್ನಿ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಕೋರ್ಟ್ ಮೆಟ್ಟಿಲೇರಿರುವ ವಿಲಕ್ಷಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಸೂರತ್‌ನ ಅಮನ್ ಎಂಬಾತ 10 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿರುವ ತನ್ನ ಪತ್ನಿಯ ಮೇಲೆ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾನೆ. ಪೊಲೀಸರು ತನ್ನ ಪ್ರಕರಣವನ್ನು ದಾಖಲಿಸದ್ದರಿಂದ ಅಮನ್, ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಹೆಂಡತಿ ತನ್ನ ಮೊದಲ ಮದುವೆಯನ್ನು ಮರೆಮಾಚಿದ್ದಾಳೆ. ಆದ್ದರಿಂದ ಮೋಸದಿಂದ ಲೈಂಗಿಕ ಸಂಬಂಧವನ್ನು ಸ್ಥಾಪಿಸಲು ತನ್ನ ಒಪ್ಪಿಗೆಯನ್ನು ಪಡೆದಿದ್ದಾಳೆ ಎಂದು ಆರೋಪಿಸಿದ್ದಾನೆ.

ದಂಪತಿಗಳು ಮದುವೆಯಾಗಿ 10 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ತನಗೆ ಈಗಾಗಲೇ ಮದುವೆಯಾಗಿದ್ದು, ತಾನು ಎರಡನೇ ಪತಿ ಎಂಬ ವಿಷಯವನ್ನು ಪತ್ನಿ ಮರೆಮಾಚಿದ್ದಾಳೆ ಎಂದು ಅಮನ್ ದೂರಿದ್ದಾನೆ. ದಂಪತಿಯ ಇಬ್ಬರು ಮಕ್ಕಳ ಡಿಎನ್‌ಎ ಪರೀಕ್ಷೆ ವರದಿ ಬಂದಾಗ ಪತಿಗೆ ಶಾಕ್ ಎದುರಾಗಿತ್ತು. ಯಾಕೆಂದರೆ, ಇಬ್ಬರು ಮಕ್ಕಳಲ್ಲಿ ಒಂದು ಮಗುವಿನ ಡಿಎನ್ಎ ಅವನಿಗೆ ಮ್ಯಾಚ್ ಆಗಿಲ್ಲ.

ಕಳೆದ 10 ವರ್ಷಗಳಿಂದ ದಂಪತಿಗಳು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದರು. ದಿನಕಳೆದಂತೆ ಪತಿ ಅಮನ್ ಗೆ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದಾನೆ. ಹೀಗಾಗಿ ಈ ಬಗ್ಗೆ ಕೂಲಂಕುಶವಾಗಿ ಗಮನಿಸಿದ್ದಾನೆ. ಮೂರನೇ ವ್ಯಕ್ತಿಯೊಂದಿಗೆ ಅವನ ಹೆಂಡತಿ ಮಾಡಿರುವ ಸಂದೇಶಗಳನ್ನು ನೋಡಿ, ಇಬ್ಬರಿಗೂ ಜಗಳವಾಗಿದೆ. ಕುಟುಂಬ ಸದಸ್ಯರು ಇಬ್ಬರ ದಾಂಪತ್ಯವನ್ನು ಉಳಿಸಲು ಪ್ರಯತ್ನಿಸಿದ್ರೂ ಅದು ವ್ಯರ್ಥವಾಯಿತು.

ಇದೀಗ ಪತಿ ಅಮನ್ ತನ್ನ ಪತ್ನಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲು ಮುಂದಾಗಿದ್ದಾನೆ. ಆದರೆ, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಇದಾದ ಬಳಿಕ ಪತಿ ನ್ಯಾಯಾಲಯದಲ್ಲಿ ಪತ್ನಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಅವರ ಮನವಿ ಅರ್ಜಿಯನ್ನು ಸ್ವೀಕರಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read