ಪಿಂಚಣಿ ನೌಕರನ ನಿವೃತ್ತಿ ನಂತರದ ಹಕ್ಕು: ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಪಿಂಚಣಿ ನೌಕರನಿಗೆ ನಿವೃತ್ತಿ ನಂತರದಲ್ಲಿ ಸಿಗುವ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಪಿಂಚಣಿ ನೌಕರನಿಗೆ ನಿವೃತ್ತಿ ನಂತರ ಸಿಗುವ ಹಕ್ಕು. ಅದು ಉದಾರ ಕೊಡುಗೆ ಅಲ್ಲ, ಸಂಬಂಧ ಪಟ್ಟ ನಿಯಮಗಳು ಅಥವಾ ಯೋಜನೆಯ ಅಡಿಯಲ್ಲಿ ಅವಕಾಶ ಇದ್ದರೆ ಪಿಂಚಣಿಯನ್ನು ಕೇಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನೌಕರನೊಬ್ಬ ಪಿಂಚಣಿಗೆ ಅರ್ಹನಾಗಿರುವ ಹುದ್ದೆಯನ್ನು ಹೊಂದಿಲ್ಲದಿದ್ದರೆ ಆತ ಪಿಂಚಣಿ ಕೇಳಲು ಅವಕಾಶವಿಲ್ಲ. ನಿಯಮಗಳ ಅಡಿಯಲ್ಲಿ ಪಿಂಚಣಿಯ ವ್ಯಾಪ್ತಿಯಲ್ಲಿ ಇಲ್ಲದ ನೌಕರನಿಗೆ ಪಿಂಚಣಿ ಕೊಡುವಂತೆ ನ್ಯಾಯಾಲಯ ಕೂಡ ಹೇಳಲಾಗದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ವಿಭಾಗೀಯ ತಿಳಿಸಿದೆ.

ಉತ್ತರ ಪ್ರದೇಶ ರಸ್ತೆ ಸಾರಿಗೆ ನಿವೃತ್ತ ಅಧಿಕಾರಿಗಳ ಸಂಘದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯ ಪೀಠ, ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ವಿಲೀನಗೊಂಡ, ಮತ್ತು ಈ ಹಿಂದೆ ಸರ್ಕಾರದ ನೌಕರರಾಗಿದ್ದವರು ಪಿಂಚಣಿಗೆ ಅರ್ಹರು. ನಿಗಮದಲ್ಲಿ ವಿಲೀನ ಆಗುವ ಮೊದಲು ಪಿಂಚಣಿಗೆ ಅರ್ಹವಾದ ಹುದ್ದೆ ಹೊಂದಿಲ್ಲದಿದ್ದರೆ ಅಂತವರಿಗೆ ಪಿಂಚಣಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read