Kaveri Water dispute : ಸುಪ್ರೀಂಕೋರ್ಟ್ ಆದೇಶ ಮರಣ ಶಾಸನ : ಮಂಡ್ಯದಲ್ಲಿ ಕಣ್ಣೀರಿಟ್ಟ ಮಹಿಳಾ ಹೋರಾಟಗಾರ್ತಿಯರು

ಮಂಡ್ಯ : ಸುಪ್ರೀಂಕೋರ್ಟ್ ಆದೇಶ ಮರಣ ಶಾಸನ ಎಂದು ಮಂಡ್ಯದಲ್ಲಿ ಮಹಿಳಾ ಹೋರಾಟಗಾರ್ತಿಯರು ಕಣ್ಣೀರಿಟ್ಟಿದ್ದಾರೆ.

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಇಂತಹ ತೀರ್ಪು ಕೊಡುವ ಬದಲು ಎಲ್ಲರಿಗೂ ವಿಷ ಕೊಡಬಹುದಿತ್ತು. ನಾವು ಕುಡಿಯುವದಕ್ಕೆ ನೀರು ಕೇಳ್ತಿದಿವಿ, ಆದರೆ ತಮಿಳುನಾಡಿನವರು ಬೇಸಾಯಕ್ಕೆ ನೀರು ಕೇಳುತ್ತಿದ್ದಾರೆ. ನಮಗೆ ಕುಡಿಯಕ್ಕೆ ನೀರು ಇಲ್ಲ ಸಂಕಟ ಆಗುತ್ತಿದೆ. ಇಡೀ ರಾಜ್ಯಕ್ಕೆ ವಿಷ ಕೊಟ್ಟಿದ್ದಾರೆ, ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕು.ರೈತರ ಹೊಟ್ಟೆ ಉರಿಸಿದರೆ ಅವರು ಉದ್ದಾರ ಆಗಲ್ಲ ಎಂದು ಮಂಡ್ಯದಲ್ಲಿ ಮಹಿಳಾ ಹೋರಾಟಗಾರ್ತಿಯರು ಕಣ್ಣೀರಿಟ್ಟಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಕರ್ನಾಟಕ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read