ಮನುಷ್ಯ ಎತ್ತರದ ಕಟ್ಟಡದ ಮೇಲಿನಿಂದ ವಿವಿಧ ಸಾಹಸಗಳನ್ನು ಮಾಡುವುದನ್ನು ನೀವೆಲ್ಲಾ ನೋಡಿರ್ತಿರಾ. ಆದ್ರೆ ಅದೇ ರೀತಿ ನಾಯಿಯೊಂದು ಸಾಹಸವನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಕಪ್ಪು ಬಣ್ಣದ ಬೀದಿ ನಾಯಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿಯುವ ಸಣ್ಣ ವಿಡಿಯೋ ಕ್ಲಿಪ್ ಒಂದು ಶೇರ್ ಆಗ್ತಿದೆ. ಈ ವಿಡಿಯೋದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 5 ನೇ ಮಹಡಿಯಿಂದ ನಾಯಿಯು ಇರುವುದು ಕಂಡು ಬಂದಿದೆ. ಜೊತೆಗೆ ಕಟ್ಟಡದ ಎತ್ತರವನ್ನು ಅಳತೆ ಮಾಡಿ ಅಂದಾಜು ಮಾಡುತ್ತಿರುವಂತೆ ಗೋಚರವಾಗಿದೆ.
ಇದಾದ ಬಳಿಕ ಎತ್ತರದ ಆ ಕಟ್ಟಡದ ಮೇಲಿನಿಂದ ಅಪಾಯಕಾರಿಯಾಗಿ ನಾಯಿ ಜಂಪ್ ಮಾಡುತ್ತೆ. ಆದ್ರೆ ವಿಶೇಷ ಅಂದ್ರೆ ಕೆಳಭಾಗದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆಯೂ ನಾಯಿಯು ತನ್ನ ಈ ಸಾಹಸದಿಂದ ಬದುಕುಳಿದಿದೆ. ಯಾವುದೇ ಪ್ರಾಣಪಾಯವಾಗದೆ ಈ ಅಪಾಯಕಾರಿ ಜಿಗಿತದಿಂದ ಏನೂ ಆಗಿಲ್ಲ ಎಂಬಂತೆ ಅಲ್ಲಿಂದ ಓಡಿ ಹೋಗಿದೆ.
ನಾಯಿ ಕಟ್ಟಡದ ಮೇಲಿನಿಂದ ಹಾರುವ ಸಂದರ್ಭದಲ್ಲಿ ಕೆಳಗಿದ್ದ ಬೇಲಿ ಮೇಲೆ ಬಂದು ಬಿದ್ದಿದೆ. ಆದ್ರೆ ಯಾವುದೇ ಹಾನಿಯಾಗಿಲ್ಲ ಎಂಬಂತೆ ಆ ನಾಯಿ ಅಲ್ಲಿಂದ ಓಡಿಹೋಗಿದೆ. ವೈರಲ್ ಆಗಿರುವ ಈ ವಿಡಿಯೋ 11.6 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಆಗಿದೆ.. crazyclipsonly ಎಂಬ ಹೆಸರಿನ X (ಹಿಂದೆ ಟ್ವಿಟರ್) ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊಗೆ “5ನೇ ಮಹಡಿಯಿಂದ ಜಿಗಿದ ನಂತರ ನಾಯಿ ಏನು ಆಗಿಲ್ಲ ಎಂಬಂತೆ ಹೆಜ್ಜೆ ಹಾಕಿದೆ” ಎಂಬ ಕ್ಯಾಪ್ಸನ್ ನೀಡಲಾಗಿದೆ.
ಎಕ್ಸ್‌ನಲ್ಲಿ ಒಬ್ರು, “ಅದು ಸೂಪರ್ ನಾಯಿ. ಆದ್ರೆ ಏಕೆ ಜಿಗಿಯಿತು ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು “ಇದು ಅಪರೂಪದ ನಾಯಿ. ಏಕಾಂಗಿಯಾಗಿ, ಧೈರ್ಯಶಾಲಿಯಾಗಿ ಬದುಕುತ್ತಿದೆ ಎಂದು ಬರೆದಿದ್ದಾರೆ. ಇದರ ಜೊತೆ ಇನ್ನೊಬ್ಬರು ಯೂಸರ್ “ನ್ಯೂಟನ್ನ 3 ನೇ ನಿಯಮವನ್ನು ಕೆಲವು ಸೆಕೆಂಡುಗಳ ಕಾಲ ವಿರಾಮ ನೀಡಲಾಗಿದೆ.” ಎಂದು ಹಾಸ್ಯ ಮಾಡಿದ್ದಾರೆ.
Dog continues walking normally after jumping from 5th floor pic.twitter.com/flPLZxDiVi
— Crazy Clips (@crazyclipsonly) October 18, 2023