ಫೈನಲ್ ಪ್ರವೇಶಿಸಲು ನಾಳೆ ಹೋರಾಡಲಿವೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್

SRH vs RR Dream11 Prediction Today Match 50: Playing XI, IPL 2024 Fantasy Cricket Tips, Sunrisers Hyderabad vs Rajasthan Royals Dream11 Team, Weather and Pitch Report, Injury Updates and Team News

ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜಯಭೇರಿ ಸಾಧಿಸಿದ್ದು, ನಾಳೆ ಕ್ವಾಲಿಫೈಯರ್ ಎರಡರಲ್ಲಿ ಹೈದರಾಬಾದ್ ತಂಡದ ಜೊತೆ  ಸೆಣಸಾಡಲು ಸಜ್ಜಾಗಿದೆ.

ನಾಳೆ ಈ ಎರಡು ತಂಡಗಳಲ್ಲಿ ಯಾವ ತಂಡ ಗೆಲ್ಲಲಿದೆಯೋ ಆ ತಂಡ ಫೈನಲ್ ನಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಐಪಿಎಲ್ ನಲ್ಲಿ ದೊಡ್ಡ ಮೊತ್ತಗಳ ದಾಖಲೆ ಬರೆದಿದ್ದು, ಬ್ಯಾಟಿಂಗ್ ಆಯ್ಕೆ ಮಾಡಿ ಮತ್ತೊಂದು ದೊಡ್ಡ ಮೊತ್ತವನ್ನು ದಾಖಲಿಸಲಿದೆಯಾ ಕಾದುನೋಡಬೇಕಾಗಿದೆ. ಇನ್ನು ಸತತ ಸೋಲಿನಿಂದ ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಬಗ್ಗು ಬಡಿಯುವ ಮೂಲಕ  ಕಮ್ ಬ್ಯಾಕ್ ಮಾಡಿದೆ.

ಈ ಬಾರಿಯ ಐಪಿಎಲ್ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸಿರುವ ಕೆಕೆಆರ್ ತಂಡ ಲೀಗ್  ಹಂತದ ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಸೋಲನುಭವಿಸಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಕೆಕೆಆರ್ ಎದುರು ಫೈನಲ್ ನಲ್ಲಿ ಯಾವ ತಂಡ ಎದುರಾಳಿಯಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.

https://twitter.com/IPL/status/1793339564184293824

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read