ನಾಳೆ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ಮುಖಾಮುಖಿ

Qualifier 1: Sunrisers and KKR, who ignited batting in IPL 2024, meet again | Crickit

ನಿನ್ನೆ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡ 36 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಗೆ  ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ ನಾಳೆ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ.

ಕೆಕೆಆರ್ ತಂಡ ಬಲಿಷ್ಠ  ಬ್ಯಾಟಿಂಗ್ ಪಡೆ ಹೊಂದಿದ್ದು, ವೆಸ್ಟ್ ಇಂಡೀಸ್ ನ ಸ್ಪಿನ್ನರ್ ಸುನಿಲ್ ನರೇನ್  ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸುವ ಮೂಲಕ ಕೆಕೆಆರ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ಈ ಬಾರಿ ಐಪಿಎಲ್ ನಲ್ಲಿ ಅತಿ ದೊಡ್ಡ ಮೊತ್ತ ದಾಖಲಿಸುವ ಮೂಲಕವೇ ಜಯಭೇರಿಯಾಗುತ್ತಿದ್ದ, ಹೈದರಾಬಾದ್ ತಂಡ ಇತ್ತೀಚಿಗೆ ಬೌಲಿಂಗ್ ನಲ್ಲಿ ಮಿಂಚುತ್ತಿದೆ. ನಾಳೆ ಯಾವ ತಂಡ ಐಪಿಎಲ್ 17ರ ಟ್ರೋಫಿ ಎತ್ತಿ ಹಿಡಿಯಲಿದೆ ಕಾದು ನೋಡಬೇಕಾಗಿದೆ.

https://twitter.com/IPL/status/1794062851839041640

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read