ಯಶಸ್ಸಿನ ಹೊಸ ದಾಖಲೆ ಬರೆದ ಸನ್ನಿ ಡಿಯೋಲ್ ‘ಗದರ್ 2’: ಹೊಸ ಸಂಸತ್ ಕಟ್ಟಡದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ

ನವದೆಹಲಿ: ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ‘ಗದರ್ 2’ ಬಾಕ್ಸ್ ಆಫೀಸ್ ಮಾತ್ರವಲ್ಲ, ಹೊಸ ಸಂಸತ್ ಕಟ್ಟಡದಲ್ಲಿಯೂ ಯಶಸ್ಸಿನ ಹೊಸ ದಾಖಲೆಗಳನ್ನು ರಚಿಸಿದೆ.

ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ ಬಸ್ಟರ್ ರನ್ ಬಾರಿಸುತ್ತಿದೆ. ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. ಇದೀಗ, ಲೋಕಸಭಾ ಸದಸ್ಯರಿಗಾಗಿ ನೂತನ ಸಂಸತ್ ಭವನದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

‘ಗದರ್ 2’ ರ ನಿರ್ದೇಶಕ ಅನಿಲ್ ಶರ್ಮಾ X ನಲ್ಲಿ(ಟ್ವಿಟರ್) ಈ ಬಗ್ಗೆ ಘೋಷಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಲೋಕಸಭೆಯ ಸದಸ್ಯರಿಗೆ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶನವನ್ನು Zee ಸ್ಟುಡಿಯೋಸ್ ಆಯೋಜಿಸುತ್ತದೆ.

ಇಂದಿನಿಂದ(ಆಗಸ್ಟ್ 25) ಮೂರು ದಿನಗಳ ಕಾಲ ಬಾಲಯೋಗಿ ಸಭಾಂಗಣದಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ‘ಗದರ್ 2’ ಪ್ರದರ್ಶಿಸಲಾಗುವುದು ಎಂದು ಅನಿಲ್ ಶರ್ಮಾ ತಿಳಿಸಿದ್ದಾರೆ.

https://twitter.com/Anilsharma_dir/status/1694962192217702799

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read