ರಾಶಿ ಬದಲಿಸಲಿರುವ ಸೂರ್ಯ……! ಈ ರಾಶಿಯವರಿಗೆ ಶುರುವಾಗಲಿದೆ ಸಂಕಷ್ಟ……!!

ಗ್ರಹಗಳ ರಾಜ ಸೂರ್ಯ, ಜುಲೈ 16ರಂದು ಕರ್ಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಬೆಳಿಗ್ಗೆ 11 ಗಂಟೆ 8 ನಿಮಿಷಕ್ಕೆ ಸರಿಯಾಗಿ ಸೂರ್ಯ, ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಯಾರ ಜಾತಕದಲ್ಲಿ ಸೂರ್ಯ ಬಲಿಷ್ಠವಾಗಿದ್ದಾನೋ ಅವರಿಗೆ ಹಣದ ಕೊರತೆ ಆಗೋದಿಲ್ಲ, ವೃತ್ತಿಯಲ್ಲಿ ಏಳ್ಗೆಯಾಗುತ್ತದೆ ಎಂದು ನಂಬಲಾಗಿದೆ. ಆದ್ರೆ ಸೂರ್ಯ ಈ ಬಾರಿ ಕರ್ಕ ರಾಶಿಗೆ ಪ್ರವೇಶ ಮಾಡುವುದರಿಂದ ಕೆಲ ರಾಶಿಯವರಿಗೆ ಸಂಕಷ್ಟ ಕಾಡಲಿದೆ.

ಕರ್ಕ ರಾಶಿ : ಈ ರಾಶಿಗೆ ಸೂರ್ಯ ಪ್ರವೇಶ ಮಾಡುವುದರಿಂದ ಈ ರಾಶಿಯವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆ ಇವರನ್ನು ಕಾಡಲಿದೆ. ಆತ್ಮವಿಶ್ವಾಸದಲ್ಲಿ ಕೊರತೆ ಕಾಣಿಸಲಿದೆ. ಉದ್ಯೋಗ ಬದಲಿಸುವ ಅನಿವಾರ್ಯತೆ ಎದುರಾಗಲಿದೆ.

ಸಿಂಹ ರಾಶಿ : ಹಣದ ಖರ್ಚು ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಹದಗೆಡಲಿದೆ. ವೃತ್ತಿ ಜೀವನದಲ್ಲಿ ಏರುಪೇರಾಗಲಿದೆ. ವ್ಯಾಪಾರಸ್ಥರು ನಷ್ಟವನ್ನು ಎದುರಿಸಬೇಕಾಗುತ್ತದೆ.

ಕನ್ಯಾ : ಇನ್ನು ಸೂರ್ಯನ ರಾಶಿ ಬದಲಾವಣೆ ಕನ್ಯಾ ರಾಶಿಯ ಮೇಲೂ ಆಗಲಿದೆ. ಈ ರಾಶಿಯ ಜನರಿಗೆ ಉದ್ಯೋಗದಲ್ಲಿ ಒತ್ತಡ ಕಾಡಲಿದೆ. ಹಣ ಉಳಿತಾಯ ಮಾಡಲು ಅವರು ಸತತ ಪ್ರಯತ್ನ ಮಾಡಬೇಕಾಗುತ್ತದೆ.

ಧನು : ಸಂಬಂಧ ಹದಗೆಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕುಟುಂಬಸ್ಥರು, ಸ್ನೇಹಿತರ ಜೊತೆ ಎಚ್ಚರಿಕೆಯಿಂದ ಮಾತನಾಡಿ. ವ್ಯಾಪಾರಿಗಳಿಗೆ ಬಾರೀ ನಷ್ಟವಾಗುವ ಸಂಭವವಿದೆ.

ಮಕರ : ಈ ರಾಶಿಯವರ ಸಾಲ ಹೆಚ್ಚಾಗಲಿದೆ. ಮಕರ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಸ್ಪರ್ಧಿಗಳ ಸ್ಪರ್ಧೆಯಿಂದ ಕೆಲಸ ಕೆಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read