ಮಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣದ ಕಥೆ ಕಟ್ಟಿದ್ದ ಸುಜಾತಾ ಭಟ್ ಗೆ ಎಸ್ ಐಟಿ ಬಿಗ್ ರಿಲೀಫ್ ನೀಡಿದೆ. ದೂರುದಾರೆ ಸುಜಾತಾ ಭಟ್ ಪ್ರಕರಣದಲ್ಲಿ ಎಫ್ ಐ ಆರ್ ದಾಖಲಾಗುವುದಿಲ್ಲ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ಸುಜಾತಾ ಭಟ್ ಅವರನ್ನು ತೀವ್ರ ವಿಚಾರಣೆ ನಡೆಸಿದ ಎಸ್ ಐಟಿ ತಂಡ ಅವರನ್ನು ಬಂಧಿಸದೇ ಕಳುಹಿಸಿದೆ. ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಸ್ ಐಟಿ ಠಾಣೆಯಲ್ಲಿ ವಿಚಾರಣೆ ಮುಗಿದ ಬಳಿಕ ಸುಜಾತಾ ಭಟ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾಅರಣೆಗೆ ಕರೆದಾಗ ಬರಬೇಕು ಎಂದು ಸೂಚಿಸಿ ಎಸ್ ಐತಿ ಅಧಿಕಾರಿಗಳು ಸುಜಾತಾ ಭಟ್ ಅವರನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಸುಜಾತಾ ಭಟ್ ಅನನ್ಯಾ ಭಟ್ ನಾಪತ್ತೆ ಪ್ರಕರಣ ಎಲ್ಲವೂ ಸುಳ್ಳು. ತಾಅನು ಹೇಳಿದ್ದು ಎಲ್ಲವೂ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಕೆಲವರು ಒತ್ತಾಯಪೂರ್ವಕವಾಗಿ ಹೇಳಿಸಿದ ಕಾರಣ ಈ ರೀತಿ ಕಥೆ ಕಟ್ಟಿದ್ದಾಗಿಯೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಸುಜಾತಾ ಭಟ್ ದೂರುದಾರೆ ಆಗಿರುವ ಕಾರಣ ಅವರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.