ಉಡುಪಿ: ಅಣ್ಣ-ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಉಡುಪಿಯ ಲೇಬರ್ ಕಾಲೋನಿಯಲ್ಲಿ ನಡೆದಿದೆ.
ಮಲ್ಲೇಶ್ ಹಾಗು ಪವಿತ್ರಾ ಆತ್ಮಹತ್ಯೆಗೆ ಶರಣಾದ ಅಣ್ಣ-ತಂಗಿ. ಇಬ್ಬರ ಆತ್ಮಹತ್ಯೆಗೆ ಕಾರಣ ಮಾತ್ರ ತಿಳಿದುಬಂದಿಲ್ಲ. ಮನೆ ಕೆಲಸಗಳಿಗೆ ಹೋಗಿ ಪವಿತ್ರಾ ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಮಹೇಶ್ ಹಾಗೂ ಪವಿತ್ರಾ ದೊಡ್ಡಮ್ಮ-ಚಿಕ್ಕಮನ ಮಕ್ಕಳು.
ಉಡುಪಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಲ್ಲೇಶ್ ವಾರದ ಹಿಂದಷ್ಟೇ ಚಿಕ್ಕಮ್ಮನ ಮನೆಗೆ ಬಂದಿದ್ದ. ಮಹೇಶ್ ತಾಯಿ ಹಾಗೂ ಪವಿತ್ರಾ ತಾಯಿ ಅಕ್ಕ-ತಂಗಿ. ಪವಿತ್ರಾ ತಾಯಿ ಹನುಮವ್ವ ರಾಯಚೂರಿಗೆ ಹೋಗಿದ್ದರು. ಅವರು ರಾಯಚೂರಿನಿಂದ ವಾಪಾಸ್ ಆಗುವಷ್ಟರಲ್ಲಿ ಅಣ್ಣ-ತಂಗಿ ಇಬ್ಬರೂ ನೇಣಿಗೆ ಕೊರಳೊಡ್ದಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.