ಟಾಯ್ಲೆಟ್ ಕ್ಲೀನ್ ಮಾಡಿ…… ಶಾಪಿಂಗ್ ಮಾಲ್ ಸ್ವಚ್ಛಗೊಳಿಸ್ತಿದ್ದ ಹುಡುಗಿ ಈಗ ಶ್ರೀಮಂತ ನಟಿ

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಸಾಧನೆ ಮಾಡಲು ಅಗತ್ಯವಿರುವ ಎಲ್ಲ ವಸ್ತುಗಳು, ಹಣಕಾಸು ಲಭ್ಯವಿರುತ್ತದೆ. ಆದ್ರೆ ಬಡ ಮಕ್ಕಳಿಗೆ ಇವೆಲ್ಲ ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಸಾಕಷ್ಟು ಕಷ್ಟಪಡಬೇಕು. ಅನೇಕ ಕಲಾವಿದರು ಕಷ್ಟಪಟ್ಟು, ಎಲ್ಲ ದುಃಖ, ನೋವುಗಳನ್ನು ಜಯಸಿ ಯಶಸ್ಸು ಗಳಿಸಿದ್ದಾರೆ. ಅದರಲ್ಲಿ ಪಾಕಿಸ್ತಾನದ ನಟಿ ಮಹಿರಾ ಖಾನ್ ಕೂಡ ಒಬ್ಬರು.

ಮಹಿರಾ ಖಾನ್, ಪಾಕಿಸ್ತಾನದ ಶ್ರೀಮಂತ ನಟಿ. ಅವರ ನಿವ್ವಳ ಮೌಲ್ಯ 58 ಕೋಟಿ ರೂಪಾಯಿ. ಪ್ರತಿ ಚಿತ್ರಕ್ಕೆ ಮಹಿರಾ ಖಾನ್‌ 3 ರಿಂದ 5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಮಹಿರಾ ಖಾನ್‌ ನಟನೆಯ ಪಂಜಾಬಿ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. 2006 ರಲ್ಲಿ ವಿಡಿಯೋ ಜಾಕಿ  ಆಗಿ ಕೆಲಸ ಮಾಡಲು ಪ್ರಾರಂಭಿಸಿದ ಮಹಿರಾ ಖಾನ್, ಬೋಲ್ ಹೆಸರಿನ ಮೊದಲ ಚಿತ್ರದಲ್ಲಿ ನಟಿಸಿದ್ದರು. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದ ಮಹಿರಾ ಖಾನ್‌, ಬಾಲಿವುಡ್‌ ಚಿತ್ರದಲ್ಲೂ ನಟಿಸಿದ್ದಾರೆ. ಮಹಿರಾ ಖಾನ್‌, ಬಾಲಿವುಡ್‌ ನ ರಯೀಸ್‌ ಚಿತ್ರದಲ್ಲಿ ನಟಿಸಿದ್ದಾರೆ.

ಕರಾಚಿಯಲ್ಲಿ ಡಿಸೆಂಬರ್ 21, 1984 ರಂದು ಜನಿಸಿದ ಮಹಿರಾ, 17 ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದ್ದರು. ಅಲ್ಲಿ ಸಾಕಷ್ಟು ಹಣದ ಸಮಸ್ಯೆ ಎದುರಿಸಿದ ಅವರು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಾಪಿಂಗ್ ಮಾಲ್‌ ಮಹಡಿಗಳನ್ನು ಒರೆಸಿ, ಶೌಚಾಲಯ ಕ್ಲೀನ್‌ ಮಾಡಿ ಅದರಿಂದ ಬಂದ ಹಣದಲ್ಲಿ ಶಿಕ್ಷಣ ಪಡೆದಿದ್ದರು. ಮಹಿರಾ ಖಾನ್‌ ತಮ್ಮ ಕಷ್ಟದ ದಿನಗಳನ್ನು ಅನೇಕ ಬಾರಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read