ಚೆನ್ನೈ: ತಂದೆ-ಮಗನ ಜಗಳ ಬಿಡಿಸಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಗುಡಿಮಂಗಲಮ್ ಜಿಲ್ಲೆಯಲ್ಲಿ ನಡೆದಿದೆ.
ಎಂ.ಷಣ್ಮುಗವೇಲು (57) ಕೊಲೆಯಾದ ಸಬ್ ಇನ್ಸ್ ಪೆಕ್ಟರ್. ತಿರುಪ್ಪುರ ಜಿಲ್ಲೆಯ ಗುಡಿಮಂಗಲಂ ಠಾಣೆಯ ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಷಣ್ಮುಗವೇಲು ಸಶಸ್ತ್ರ ಪೊಲೀಸ್ ದಳದ ಕಾನ್ಸ್ ಟೇಬಲ್ ಅಳಗುರಾಜ ಜೊತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಕಂಠಪೂರ್ತಿ ಕುಡಿದಿದ್ದ ತಂದೆ-ಮಗನ ನಡುವೆ ಜಗಳ ಶುರುವಾಗಿತ್ತು. ಇದನ್ನು ಕಂಡು ಸಬ್ ಇನ್ಸ್ ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಜಗಳ ಬಿಡಿಸಲು ಹೋಗಿದ್ದಾರೆ. ಈ ವೇಳೆ ಜಗಳ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೈಲಿದ್ದ ಕುಡುಗೋಲಿನಿಂದ ಸಬ್ ಇನ್ಸ್ ಪೆಕ್ಟರ್ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾನ್ಸ್ ಟೇಬಲ್ ಪಾರಾಗಿದ್ದಾರೆ.