Viral Video | ಅಬ್ಬಾ……ಕ್ರಿಕೆಟಿಗ ಧೋನಿ ಬಳಿಯಿದೆ 100ಕ್ಕೂ ಹೆಚ್ಚಿನ ಬೈಕ್

ರಾಂಚಿ: ಕ್ರಿಕೆಟ್ ಸೂಪರ್‌ಸ್ಟಾರ್ ಎಂಎಸ್ ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸಿ, ಭಾರತಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ತಂದುಕೊಟ್ಟವರು. ರೈಲ್ವೇ ಟಿಸಿಯಿಂದ ಭಾರತೀಯ ಕ್ರಿಕೆಟ್ ತಂಡದ ನಾಯನ ಸ್ಥಾನ ಪಡೆಯುವವರೆಗೆ ಧೋನಿ ಮಾಡಿರುವ ಸಾಧನೆ ಅಮೋಘ. ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಐದು ಬಾರಿ ಟ್ರೋಫಿ ಎತ್ತಿಹಿಡಿದಿರುವ ಕೀರ್ತಿಯೂ ಇವರದ್ದು. ಕೇವಲ ಕ್ರಿಕೆಟ್ ಅಷ್ಟೇ ಅಲ್ಲ, ಬೈಕ್ ಅಂದ್ರೂ ಧೋನಿಗೆ ಪಂಚಪ್ರಾಣ.

ಹೌದು, ಧೋನಿ ಬೈಕ್‌ಗಳ ಬಗ್ಗೆ ಕ್ರಿಕೆಟ್ ಅಷ್ಟೇ ಉತ್ಸಾಹವನ್ನು ಹೊಂದಿದ್ದಾರೆ. ಭಾರತದ ಮಾಜಿ ವೇಗಿ ವೆಂಕಟ್ ಪ್ರಸಾದ್ ಅವರು ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಂಚಿಯಲ್ಲಿರುವ ಧೋನಿ ಮನೆಯಲ್ಲಿ ಪ್ರದರ್ಶಿಸಲಾದ ಮೋಟಾರ್‌ ಸೈಕಲ್‌ಗಳ ದೊಡ್ಡ ಸಂಗ್ರಹವನ್ನು ತೋರಿಸುತ್ತದೆ. ಪ್ರಸಾದ್ ಅವರು 100 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಬೈಕ್‌ಗಳನ್ನು ನೋಡಿ ದಿಗ್ಭ್ರಮೆಗೊಂಡರು. ಧೋನಿ ಬೈಕ್ ಶೂರೂಮ್ ಅನ್ನೇ ಹೊಂದಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ರು

ಒಬ್ಬ ವ್ಯಕ್ತಿಯಲ್ಲಿ ನಾನು ನೋಡಿದ ಹುಚ್ಚು ಉತ್ಸಾಹಗಳಲ್ಲಿ ಇದು ಒಂದಾಗಿದೆ. ಎಂಎಸ್‌ ಧೋನಿ ಎಂದರೆ ಏನು? ಮಹಾನ್ ಸಾಧಕ ಈತ. ಅಬ್ಬಾ ಎಷ್ಟೆಲ್ಲಾ ಸಂಗ್ರಹಿಸಿದ್ದಾರೆ. ಇದು ಅವರ ರಾಂಚಿಯ ಮನೆಯಲ್ಲಿ ಅವರ ಬೈಕ್ ಮತ್ತು ಕಾರುಗಳ ಸಂಗ್ರಹದ ಒಂದು ನೋಟ. ಇದು ಧೋನಿಗಿರುವ ಪ್ಯಾಷನ್ ಎಂದು ವಿಡಿಯೋ ಸಹಿತ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read