ಕಾರವಾರ: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 13 ವರ್ಷದ ಬಾಲಕ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
7ನೇ ತರಗತಿ ವಿದ್ಯಾರ್ಥಿ ಓಂ ಕದಂ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಹಳಿಯಾಳ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಓಂ ಕದಂಗೆ ತಂದೆ, ಮೊಬೈಲ್ ನೋಡುತ್ತಾ ಕೂರಬೇಡ ಎಂದು ಬುದ್ಧಿ ಹೇಳಿದ್ದಾರೆ. ಆದರೂ ಹಠ ಮಾಡಿ ಮೊಬೈಲ್ ನೋಡುತ್ತಿದ್ದ. ಈ ವೇಳೆ ತಂದೆ ಮಗನ ಬಳಿ ಇದ್ದ ಮೊಬೈಲ್ ಕಸಿದು ಮೊಬೈಲ್ ನಲ್ಲಿ ಕಾಲ ಕಳಿಯಬೇಡ. ಹೋಗಿ ಓದು ಎಂದು ಗದರಿದ್ದಾರೆ. ಇಷ್ಟಕ್ಕೆ ಅವಮಾನಿತನಾದ ಬಾಲಕ ರೂಮಿಗೆ ಹೋದವನೇ ನೇಣಿಗೆ ಕೊರಳೊಡ್ಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ತಂದೆ ಮನೋಹರ್ ಹಾಗೂ ತಾಯಿ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಓಂ ಕದಂ ಬದುಕುಳಿದಿಲ್ಲ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.