ತರಗತಿಯಲ್ಲಿ ಪಾಠ ನಡೆಯುವಾಗ ಎಲ್ಲರಿಗೂ ದೋಸೆ ಕೊಟ್ಟ ವಿದ್ಯಾರ್ಥಿ….!

ಕಾಲೇಜುಗಳಲ್ಲಿ ಉಪನ್ಯಾಸ ನಡೆಯುತ್ತಿರುವಾಗ ವಿದ್ಯಾರ್ಥಿಗಳು ಬೇಕಾದದ್ದನ್ನೆಲ್ಲ ಕದ್ದು ತಿನ್ನುವುದು ಮಾಮೂಲು. ಆದರೆ ಉಪನ್ಯಾಸದ ಸಮಯದಲ್ಲಿ ಯಾರಾದರೂ ಬಿಸಿ ಊಟವನ್ನು ಬಡಿಸುವ ಬಗ್ಗೆ ನೀವು ಕೇಳಿದ್ದೀರಾ? ಅಂಥದ್ದೇ ವಿಡಿಯೋ ವೈರಲ್​ ಆಗಿದೆ.

ಅಮೆರಿಕದ ಕಾಲೇಜೊಂದರಲ್ಲಿ ಇದು ನಡೆದಿದೆ. ಒಬ್ಬ ವಿದ್ಯಾರ್ಥಿ ದೋಸೆ ಮಾಡುವ ಯಂತ್ರದೊಂದಿಗೆ ತರಗತಿಗೆ ಎಂಟ್ರಿ ಕೊಟ್ಟಿದ್ದಾನೆ. ನಂತರ ಉಪನ್ಯಾಸ ನಡೆಯುವ ವೇಳೆ ಆತ ಎಲ್ಲರಿಗೂ ಬಿಸಿಬಿಸಿ ದೋಸೆ ಮಾಡಿ ಕೊಟ್ಟಿದ್ದಾನೆ.

ವಿದ್ಯಾರ್ಥಿಯನ್ನು ಪ್ರಣ್ವ ಪನ್ನಾಲ್ ಎಂದು ಗುರುತಿಸಲಾಗಿದೆ, ಈತ ಇನ್‌ಸ್ಟಾಗ್ರಾಮ್‌ನಲ್ಲಿ ಇದರ ವಿಡಿಯೋ ಶೇರ್​ ಮಾಡಿದ್ದಾನೆ.

ಪ್ರೊಫೆಸರ್ ಇಡೀ ಬೆಳವಣಿಗೆಯನ್ನು ನಗುಮುಖದಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಲೆಕ್ಚರ್​ ಅವರಿಗೂ ವಿದ್ಯಾರ್ಥಿ ದೋಸೆ ಕೊಟ್ಟಿದ್ದಾನೆ. ಅವರು ಅದಕ್ಕೆ ಏನೂ ಎದುರುತ್ತರ ನೀಡಲಿಲ್ಲ. ಈ ವಿಡಿಯೋ ಹಲವು ಕಾಲೇಜಿಗರ ಗಮನ ಸೆಳೆದಿದ್ದು, ಆಹಾ! ತಮ್ಮ ಕಾಲೇಜಿನಲ್ಲಿಯೂ ಹೀಗೆಯೇ ಇದ್ದರೆ ಎಷ್ಟು ಚೆನ್ನ ಎನ್ನುತ್ತಿದ್ದಾರೆ.

https://youtu.be/ewj4g42bOW8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read