ಭೋಪಾಲ್: ಪರೀಕ್ಷಾ ಕೊಠಡಿಯಲ್ಲಿ ಐಎ ಎಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿಯನ್ನು ಎಳೆದು ಕಪಾಳಕ್ಕೆ ಹೊಡೆದ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಾಮಜೈಕ ಜಾಲತಾಣಗಳಲ್ಲಿಯೂ ವಿಡಿಯೋ ವೈರಲ್ ಆಗಿದೆ. ದೀನ್ ದಯಾಳ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ಬಿಎಸ್ ಸಿ ಎರಡನೇ ವರ್ಷದ ಗಣಿತ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ತಪಾಸೆಣೆಗೆಂದು ಸಂಜೀವ್ ರಾಥೋಡ್ ಎಂಬ ಅಧಿಕಾರಿ ಹೋಗಿದ್ದಾರು. ರೋಹಿತ್ ರಾಥೋಡ್ ಎಂಬ ವಿದ್ಯಾರ್ಥಿಯನ್ನು ಏಕಾಏಕಿ ಪರೀಕ್ಷಾ ಹಾಲ್ ನಲ್ಲಿ ಎಳೆದಾಡಿ ಕಪಾಳ ಮೋಕ್ಷ ಮಾಡಿದ್ದಾರೆ.
ವಿದ್ಯಾರ್ಥಿ ಕಾಪಿ ಮಾಡುತ್ತಿದ್ದ ಅದಕ್ಕಾಗಿ ಹೊಡೆದಿದ್ದೇನೆ ಎಂದು ಅಧಿಕಾರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.