ಕೋಲಾರ: ಶಾಲೆಯ ಆವರಣದಲ್ಲಿದ್ದ ಸಂಪ್ ಗೆ ಬಿದ್ದು ಮೂರನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘೋರ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿಯಲ್ಲಿ ನಡೆದಿದೆ.
ನರೇಂದ್ರ (9) ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನರೇಂದ್ರ ಇಂದು ಬೆಳಿಗ್ಗೆ ಎಂದಿನಮ್ತೆ ಶಾಲೆಗೆ ಬಂದಿದ್ದ. ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಬಾಲಕನಿಗಾಗಿ ಶಾಲೆ ಸಿಬ್ಬಂದಿ, ಪೋಷಕರು ಇದೀ ಗ್ರಾಮದಲ್ಲಿ ಹುಡುಕಾಡಿದ್ದರು. ಆದರೆ ಎಲ್ಲಿಯೂ ಬಾಲಕನ ಸುಳಿವು ಸಿಕ್ಕಿರಲಿಲ್ಲ.
ಇದೀಗ ಶಾಲೆಯ ಆವರಣದಲ್ಲಿಯೇ ಇದ್ದ ಸಂಪ್ ನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
