ಬೆಂಗಳೂರು: ಮನೆಯ ಮಹಡಿಯಿಂದಲೇ ಆಯತಪ್ಪಿ ಬಿದ್ದು 19 ವರ್ಷದ ವಿದ್ಯಾರ್ಥಿನಿಯೊಬ್ಬರು ಸಾವನ್ನಪಿರುವ ದಾರುಣ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.
ಮನೆಯ ಎರಡನೇ ಮಹಡಿಯಲ್ಲಿ ನಿಂತಿದ್ದ ವಿದ್ಯಾರ್ಥಿನಿ ಏಕಾಏಕಿ ಆಯ ತಪ್ಪಿ ಕೆಳಗೆ ಬಿದ್ದು, ಈ ದುರಂತ ಸಂಭವಿಸಿದೆ. 19 ವರ್ಷದ ಪ್ರಿಯಾಂಕಾ ಮೃತ ವಿದ್ಯಾರ್ಥಿನಿ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.