ಚಿತ್ರದುರ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 19 ವರ್ಷದ ಓ. ಚೇತನ್ ಮೃತಪಟ್ಟ ವಿದ್ಯಾರ್ಥಿ.
ಚಿತ್ರದುರ್ಗದ ಕೋಣನಹಟ್ಟಿ ನಿವಾಸಿಯಾಗಿದ್ದ ಚೇತನ್ ಸಿ.ಎನ್.ಸಿ. ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರೂ ಆರು ದಿನಗಳ ಹಿಂದೆ ಪರೀಕ್ಷೆ ಬರೆದ ಅವರು ಕೆಲ ದಿನಗಳಿಂದ ನೀಟ್ ತರಬೇತಿ ಪಡೆಯುತ್ತಿದ್ದರು. ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಶನಿವಾರ ಕನಕ ವೃತ್ತ ಸಮೀಪದ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.

 
			 
		 
		 
		 
		 Loading ...
 Loading ... 
		 
		 
		