ಹಣ ಪಡೆದು ಸಾಮೂಹಿಕ ನಕಲಿಗೆ ಅವಕಾಶ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ಗಂಭೀರ ಆರೋಪ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಹಣ ಪಡೆದುಕೊಂಡು ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಇನ್ವಿಜಿಲೇಟರ್ ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.

ಜನವರಿಯಲ್ಲಿ ನಡೆದ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಎಂಬಿಎ ವಿದ್ಯಾರ್ಥಿ ಈ ಆರೋಪ ಮಾಡಿದ್ದಾನೆ.

ಈ ಆರೋಪವು ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಆರೋಪಗಳಿಗೆ ಉತ್ತರ ಕೋರಿ ಇನ್ವಿಜಿಲೇಟರ್ ಮತ್ತು ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ ನೋಟಿಸ್ ನೀಡಲಾಗುವುದು ಎಂದು ವಿವಿ ಹೇಳಿದೆ.

ಎಂಬಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಯಶ್ ಭೂತಾನಿ ಜನವರಿಯಲ್ಲಿ ಮಾಲ್ವಾ ಕಾಲೇಜಿನಲ್ಲಿ ಎಂಬಿಎ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದ.

ಅವರ ಪ್ರಕರಣವು UFM ಸಮಿತಿಯ ಮುಂದೆ ಇತ್ತು. ಸಮಿತಿಯು ವಿದ್ಯಾರ್ಥಿಯ ಸಂಪೂರ್ಣ ಸೆಮಿಸ್ಟರ್ ಅನ್ನು ರದ್ದುಗೊಳಿಸಲು ಶಿಫಾರಸು ಮಾಡಿತು.

ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ ವಿದ್ಯಾರ್ಥಿ ತಾನು ನಕಲು ಮಾಡಿ ಸಿಕ್ಕಿಬಿದ್ದ ಪತ್ರಿಕೆಯನ್ನಷ್ಟೇ ರದ್ದು ಮಾಡಬೇಕು. ಆದರೆ ಸಂಪೂರ್ಣ ಸೆಮಿಸ್ಟರ್ ರದ್ದುಮಾಡಬೇಡಿ ಎಂದು ಹೇಳಿದ್ದಾನೆ.

ಪರೀಕ್ಷೆಯಲ್ಲಿ ನಾನೊಬ್ಬನೇ ನಕಲು ಮಾಡಿಲ್ಲ. ಇನ್ನೂ 10 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಆದಾಗ್ಯೂ, ಇನ್ವಿಜಿಲೇಟರ್‌ಗಳು ಅವರಿಂದ ಹಣ ಪಡೆದು ಬಿಟ್ಟಿದ್ದಾರೆ. ನನ್ನ ಬಳಿ ಹಣ ಇರಲಿಲ್ಲ ಹಾಗಾಗಿ ನನ್ನ ವಿರುದ್ಧ ಯುಎಫ್‌ಎಂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read