ಚಿಕ್ಕಮಗಳೂರು: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಕ್ಕೆ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಯೋರ್ವನನ್ನು ಕಾಲೇಜಿನಿಂದಲೇ ಹೊರ ಹಾಕಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ದ್ವಿತೀಯ ಪಿಯು ವಿದ್ಯಾರ್ಥಿ ಇದೇ ಮೊದಲ ಬಾರಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಹೋಗಿದ್ದ. ಕಾಲೇಜು ಆಡಳಿತ ಮಂಡಳಿ ಮಾಲೆ ತೆಗೆದು ಕಾಲೇಜಿನ ಒಳಗೆ ಬಾ ಎಂದು ವಿದ್ಯಾರ್ಥಿಗೆ ಸೂಚಿಸಿದೆ.
ವಿದ್ಯಾರ್ಥಿಗೆ ಮಾಲೆ ತೆಗೆದು ಬಾ, ಇಲ್ಲವಾದಲ್ಲಿ ಬೇಡ ಎಂದು ಕಾಲೇಜು ಕ್ಯಾಂಪಸ್ ನಿಂದಲೇ ವಿದ್ಯಾರ್ಥಿಯನ್ನು ಹೊರಕಳುಹಿಸಿದ್ದಾರೆ. ಯಾವುದೇ ಜಾತಿ-ಧರ್ಮವನ್ನು ಬಿಂಬಿಸುವಂತೆ ಶಾಲಾ-ಕಾಲೇಜಿಗೆ ಬರುವಂತೆ ಇಲ್ಲ ಎಂದು ಸರ್ಕಾರದಿಂದಲೇ ಸರ್ಕ್ಯೂಲರ್ ಕೂಡ ಇದೆ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ಮನವೊಲಿಸಿ ವಿದ್ಯಾರ್ಥಿಯನ್ನು ಮತ್ತೆ ಕಾಲೇಜಿಗೆ ಕಳುಹಿಸಲಾಗಿದೆ. ದ್ಯ ಪರಿಸ್ಥಿತಿ ಶಾಂತವಾಗಿದೆ.
