BIG NEWS: ವ್ಯಾಪಾರಿಗಳು, ತಿನಿಸು ಮಾರಾಟಗಾರರಿಗೆ ಮುಖ್ಯ ಮಾಹಿತಿ: ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಲೋಟ, ಕ್ಯಾರಿ ಬ್ಯಾಗ್ ನಿಷೇಧ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಸ್ಥರು, ತಿಂಡಿ-ತಿನಿಸು ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ಕಾಫಿ, ಚಹಾ, ಪಾನೀಯ, ತಿಂಡಿ-ತಿನಿಸು ಆಹಾರ ಪಧಾರ್ಥಗಳಿಗೆ ಕಪ್, ಮೇಣಲೇಪಿತ ಪೇಪರ್ ಕಪ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಚಮಚ, ಸ್ಟ್ರಾ ಗಳ ಬಳಕೆಯನ್ನು ನಿಷೇದಿಸಲಾಗಿದೆ.

ನಗರದ ಯಾವುದೇ ಬೀದಿ ಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಕಪ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಚಮಚ, ಸ್ಟ್ರಾಗಳನ್ನು ಉಪಯೋಗಿಸದಂತೆ ಸೂಚಿಸಲಾಗಿದೆ.

ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಲು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ನಿಯಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಎಲ್ಲಾ ಬೀದಿ ಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ತ್ಯಾಜ್ಯನಿರ್ವಹಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read