ಬಯಲಾಯ್ತು ವಾಯುಮಂಡಲದಲ್ಲಿ ಕೇಳಿ ಬಂದ ನಿಗೂಢ ಶಬ್ದದ ರಹಸ್ಯ: ಸೌರಚಾಲಿತ ಬಲೂನ್‌ಗಳ ಸಹಾಯದಿಂದ ಪತ್ತೆ ಹಚ್ಚಲಾಯ್ತು ಸದ್ದು

ಸೌರಮಂಡಲ ಈ ಮಾಯಾವಿ ಲೋಕದ ಭಾಗ ನಾವಾಗಿದ್ದರೂ ಇಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ನಮಗೆ ಗೊತ್ತೇ ಆಗೋಲ್ಲ. ವಿಜ್ಞಾನಿಗಳು ಅಂತಹ ನಿಗೂಢ ಸಂಗತಿಗಳ ಬೆನ್ನತ್ತಿ ಕೆಲವನ್ನ ನಮ್ಮ ಮುಂದೆ ಇಡುತ್ತಾರೆ. ಇತ್ತೀಚೆಗೆ ಸೌರಮಂಡಲದ ಭಾಗವಾಗಿರುವ ವಾಯುಮಂಡಲದಲ್ಲಿ ನಡೆದಿರೊ ಘಟನೆಯೊಂದನ್ನ ವಿಜ್ಞಾನಿಗಳು ಜನರ ಮುಂದೆ ಇಟ್ಟಿದ್ದಾರೆ. ಸುಮಾರು 70 ಸಾವಿರ ಅಡಿಗಳ ಎತ್ತರದಲ್ಲಿ ವಿಚಿತ್ರ ಅಷ್ಟೇ ಪ್ರಭಾವಶಾಲಿಯಾಗಿರುವಂತಹ ಧ್ವನಿ ಹೊರಹೊಮ್ಮಿರುವುದನ್ನ ಪತ್ತೆ ಮಾಡಲಾಗಿದೆ. ಅದು ಎಲ್ಲಿಂದ ಬಂತು? ಹೇಗೆ ಬಂತು? ಅಂತ ಇನ್ನೂ ಪತ್ತೆಯಾಗಿಲ್ಲ.

ಡೇನಿಯಲ್ ಔಮನ್ ಮತ್ತು ಸ್ಟಾಂಡಿಯಾ ನಾಷನಲ್ ಲ್ಯಾಬೋರೇಟರೀಸ್ ವಿಜ್ಞಾನಿಗಳು ಕೇಳಿ ಬಂದ ನಿಗೂಢ ದನಿಯನ್ನ ಸೌರಚಾಲಿತ ಬಲೂನ್ ಗಳಲ್ಲಿ ಮೈಕ್ರೋಫೋನ್ ಅಳವಡಿಸಿ ಧ್ವನಿಯನ್ನ ಸೆರೆಹಿಡಿಯಲು ಪ್ರಯತ್ನ ಮಾಡಿದ್ದಾರೆ.

ಇತ್ತಿಚೆಗೆ ಚಿಕಾಗೋದಲ್ಲಿ ನಡೆದ 184ನೇ ಅಕೌಸ್ಟಿಕಲ್ ಸೊಸೈಟಿ ಆಫ್ ಅಮೆರಿಕ ಸಭೆಯಲ್ಲಿ ಪ್ರಸ್ತುತ ಪಡಿಸಲಾಯಿತು. ಅಂಟಾರ್ಟಿಕಾವನ್ನು ಸುತ್ತುವ NASA ಬಲೂಲನ್ ಬೌಮನ್ ರೆಕಾರ್ಡಿಂಗ್ ಮಾಡಿದ್ದನ್ನ, ಸಭೆಯಲ್ಲಿ ಸೇರಿದ್ದ ಸದಸ್ಯರ ಮುಂದಿಟ್ಟಿದ್ದಾರೆ.

ಮೆಕ್ಸಿಕೋದ ಸ್ಟಾಂಡಿಯಾ ನ್ಯಾಷನಲ್ ಲ್ಯಾಬೋರೇಟರೀಸ್‌ನ ವಾಯುವಂಡಲ ಪ್ರಧಾನ ಮುಖ್ಯಸ್ಥರಾದ, ವಿಜ್ಞಾನಿ ಡೇನಿಯಲ್ ಬೌಮನ್ ಇವರು ಪದವಿ ಓದುತ್ತಿದ್ದಾಗ ನ್ಯೂ ಸೌಂಡ್ ಸೈಪ್ (ದನಿ ತರಂಗ)ಅನ್ನು ಅನ್ವೇಷಿಸ ಬೇಕು ಅನ್ನೊ ಕನಸನ್ನ ಕ೦ಡಿದ್ದರು. ಇದೇ ಉದ್ದೇಶದಿಂದ ಇವುರ ಇನ್ಸಾ ಸೌಂಡ್ ಪರಿಕಲ್ಪನೆಯನ್ನ ಪರಿಚಯಿಸಿದರು. ಇದು ಮಾನವನ ಕಿವಿಗೆ ಕೇಳಿಸಲಾಗದ ಜಾಲಾಮುಖಿಗಳಿಂದ ಉತ್ಪತ್ತಿಯಾಗುವ ತರಂಗಗಳಾಗಿವೆ.

ಸದ್ಯಕ್ಕೆ ಸೆರೆಹಿಡಿದಿರುವ ಆಡಿಯೋದಲ್ಲಿ ರಾಸಾಯನಿಕ ಸ್ಫೋಟ, ಗುಡುಗು, ಘರ್ಷಣೆ, ಸಮುದ್ರದ ಅಲೆ, ವಿಮಾನ, ಸಬ್ ಆರ್ಬಿಟಲ್, ರಾಕೆಟ್ ಉಡಾವಣೆ, ಭೂಕಂಪ, ಜೆಟ್ ವಿಮಾನಕ್ಕೆ ಸಂಬಂಧಿಸಿದ ಶಬ್ದಗಳನ್ನ ಸೆರೆಹಿಡಿಯಲಾಗಿದೆ.

ಬೌಮನ್ ಮತ್ತು ಈತನ ಸಹದ್ಯೋಗಿಗಳು ಸೌರಚಾಲಿತ ಬಲೂನ್‌ಗಳ ಹಿಂದೆ ಕಾಮರಾ ಹಾಗೂ ಮೈಕೋಫೋನ್‌ಗಳನ್ನ ಅಳವಡಿಸಿ ಬಾಹ್ಯಾಕಾಶ ಮತ್ತು ಭೂಮಿಯ ಮೈಲೈ ಚಿತ್ರಗಳನ್ನ ಮೇಲಿನಿ೦ದಲೇ ಸೆರೆಹಿಡಿಯಲು ಪ್ರಯತ್ನಿಸಿದ್ದರು.

ಜ್ವಾಲಾಮುಖಿಗಳು ಹೊರಸೂಸುವ ಶಬ್ದಗಳನ್ನು ಸೆರೆಹಿಡಿಯಲೆಂದೇ ಇನ್ ಫ್ರಾಸೌಂಡ್ ರೆಕಾರ್ಡರ್ ಅನ್ನ ಬಲೂನ್‌ಗಳಿಗೆ ಅಳವಡಿಸಲಾಗುತ್ತೆ. ಆದರೂ 50 ವರ್ಷಗಳಿಂದ ವಾಯುವಂಡಲದ ಬೂಲೂನ್‌ಗಳೀಗೆ ಮೈಕ್ರೋಫೋನ್‌ಗಳನ್ನ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಜೊನಾಥನ್ ಲೀಸ್ ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ಬೌಮನ್ ಸಹೆಗಾರರಾದ ಚಾಪೆಲ್ ಹಿಲ್ ಅವರ ಸಹಾಯ ಪಡೆದು ಭೂಕ೦ಪ ಶಾಸ್ತ್ರ ಮತ್ತು ಜಾಲಾಮುಖಿ ಶಾಸ್ತ್ರದ ಮೇಲೆ ಒತ್ತು ನೀಡಿ ಈ ಸೌರ ಚಾಲಿತ ಬಲೂನ್ ಗಳನ್ನ ಸಿದ್ಧಪಡಿಸಿ 70 ಸಾವಿರ ಅಡಿಗಳ ಮೇಲೆ ಕೇಳಿ ಬರುವ ದನಿಯನ್ನ ಪತ್ತೆ ಹಚ್ಚಲಾಯ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read