ಸ್ನಾನ ಮಾಡಿದ ಬಳಿಕ ಬದಲಾಯ್ತು ಹೆಂಡ್ತಿ ಮೈಬಣ್ಣ; ನನಗೆ ಮೋಸವಾಗಿದೆ ಎಂದು ಖಾಕಿ ಮುಂದೆ ಗಂಡನ ‘ಕಣ್ಣೀರು’

ನಾನು ನೋಡಿದಾಗ ಇದ್ದ ಮೈಬಣ್ಣವೇ ಬೇರೆ, ಈಗ ನನ್ನ ಹೆಂಡ್ತಿಯ ಮೈಬಣ್ಣವೇ ಬೇರೆ. ಅವಳು ಮದುವೆ ಮುಂಚೆ ಫೋಟೋದಲ್ಲಿ ನೋಡಿದಂತೆ ಇಲ್ಲ ನನಗೆ ಮೋಸವಾಗಿದೆ ನ್ಯಾಯ ಕೊಡಿ ಎಂದು ನವವಿವಾಹಿತ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.

ಮದುವೆ ಮುಗಿಸಿ ಮನೆಗೆ ಬಂದ ವಧು ಮೇಕ್ಅಪ್ ತೆಗೆದಾಗ ವರನಿಗೆ ಕಸಿವಿಸಿಯಾಗಿ ನಂತರ ತನ್ನ ಹೆಂಡತಿಯ ಬಗ್ಗೆ ವ್ಯಂಗ್ಯವಾಡಲು ಪ್ರಾರಂಭಿಸಿದನು. ಕೆಲವೇ ದಿನಗಳಲ್ಲಿ ನಿರಂತರ ನಿಂದಿಸುವಿಕೆಯಿಂದ ಪತ್ನಿ ಬೇಸರಗೊಂಡು, ಪತಿ ಮನೆ ಬಿಟ್ಟು ತನ್ನ ಹೆತ್ತವರ ಮನೆಗೆ ಹೋಗಿ ಗಂಡನ ವಿರುದ್ಧ ದೂರು ದಾಖಲಿಸಿದಳು. ಇದೀಗ ತಾನು ಮೋಸ ಹೋಗಿರುವುದಾಗಿ ಪತಿ ಹೇಳಿಕೊಂಡಿದ್ದು ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಇಟ್ಟಿದ್ದಾನೆ.

ಆಗ್ರಾ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 2022 ರಲ್ಲಿ ಆಗ್ರಾದ ಹುಡುಗಿ ಅದೇ ನಗರದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಮದುವೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. ವಧು ತನ್ನ ಅತ್ತೆಯ ಮನೆಗೆ ಬಂದಾಗ, ವರ ಅವಳ ನಿಜವಾದ ಮೈಬಣ್ಣ ನೋಡಿದ ಮೇಲೆ ಅಸಹನೀಯನಾದ.

ಮದುವೆಗೆ ಮೊದಲು ವಧುವನ್ನು ನೋಡಿದಾಗ ಅವಳು ಸುಂದರವಾಗಿ ಕಾಣಿಸಿದ್ದಳು, ಅವಳ ಕಣ್ಣುಗಳು ಚೆನ್ನಾಗಿ ಕಾಣುತ್ತಿದ್ದವು, ಆದರೆ ಈಗ ಅವಳ ಚರ್ಮ ಕಪ್ಪಾಗಿದೆ ಮತ್ತು ಅವಳ ಕಣ್ಣುಗಳು ಮೊದಲಿನಂತಿಲ್ಲ ಎಂದು ಆರೋಪಿಸಿದ್ದಾನೆ. ತಾನು ಮೋಸ ಹೋದೆನೆಂದು ಭಾವಿಸಿದ ಆತ ಪತ್ನಿಯನ್ನು ನಿಂದಿಸಲು ಆರಂಭಿಸಿದ.

ಗಂಡನ ನಡೆಯಿಂದ ಪತಿ-ಪತ್ನಿಯರ ನಡುವೆ ವಾಗ್ವಾದ ಶುರುವಾಯ್ತು. ಕುಟುಂಬ ಸಲಹಾ ಕೇಂದ್ರದಲ್ಲಿ ಇಬ್ಬರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ಪತಿಯ ನಿರಂತರ ನಿಂದಿಸುವಿಕೆಯಿಂದ ತನಗೆ ತೀವ್ರ ನೋವಾಗಿದೆ ಎಂದು ಪತ್ನಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read