ಹೈದರಾಬಾದ್ : ಪಾಪಿ ತಂದೆಯೋರ್ವ 11 ವರ್ಷದ ಮಗನನ್ನೇ ಕೊಂದ ಘಟನೆ ಹೈದರಾಬಾದ್’ನ ಚಂದ್ರಾಯನಗುಟ್ಟದಲ್ಲಿ ನಡೆದಿದೆ.
ಮಗ ಇತರ ಮಕ್ಕಳೊಂದಿಗೆ ಆಟವಾಡ್ತಿದ್ದಕ್ಕೆ ಸಿಟ್ಟಿಗೆದ್ದು ಮಲತಂದೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. 11 ವರ್ಷದ ಪುತ್ರನ ಮೇಲೆ ಈ ಕ್ರೌರ್ಯ ಎಸಗಿದ್ದಾನೆ. ಪುತ್ರ ಮೊಹಮ್ಮದ್ ಗೆ ಥಳಿಸಿ ನೆಲಕ್ಕೆ ಎತ್ತಿ ಎಸೆದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳ ಜೊತೆ ಆಟ ಆಡಬಾರದು ಎಂದು ತಂದೆ ಹಲ್ಲೆ ಮಾಡಿದ್ದಾನೆ. ಆದರೆ ಅಚಾತುರ್ಯ ನಡೆದು ಹೋಗಿದೆ.
