Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. ಇದರ ವಿಡಿಯೋ ವೈರಲ್​ ಆಗಿದೆ. ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ವೆಟ್ಟೈ ಹಂಚಿಕೊಂಡಿರುವ ಈ ವೀಡಿಯೊವು ದಿ ಬಿವಿಕೆ ಬಿರಿಯಾನಿ ಎಂಬ ಹೆಸರಿನ ಔಟ್‌ಲೆಟ್ ಅನ್ನು ತೋರಿಸುತ್ತದೆ. ಬಿರಿಯಾನಿಗಾಗಿ ಕೆಲವು ಆಯ್ಕೆಗಳಿದ್ದು, ನೀವು ಯಾವುದನ್ನು ಆಯ್ಕೆ ಮಾಡುತ್ತೀರೋ ಆ ಬಿರಿಯಾನಿ ಮಷಿನ್​ನಲ್ಲಿ ಪ್ಯಾಕ್​ ಮಾಡಿ ಬರುತ್ತದೆ.

ಬಿರಿಯಾನಿಗೆ ಆರ್ಡರ್​ ಕೊಟ್ಟ ಮೇಲೆ ಅಲ್ಲಿ ನಿಗದಿ ಮಾಡಿದ ಮೊತ್ತವನ್ನು ಪಾವತಿಸಬೇಕು. ಪರದೆಯು ಕೆಲವು ನಿಮಿಷಗಳ ಕಾಯುವ ಸಮಯವನ್ನು ತೋರಿಸುತ್ತದೆ. ಮೂರೋ, ನಾಲ್ಕೋ ನಿಮಿಷಗಳ ಕೌಂಟ್​ಡೌನ್​ ಶುರುವಾಗುತ್ತದೆ. ಜೀರೋ ಆಗುತ್ತಿದ್ದಂತೆಯೇ ಸಿದ್ಧಪಡಿಸಿದ ಬಿರಿಯಾನಿ ಪ್ಯಾಕೆಟ್ ಬರುತ್ತದೆ. ಅಂದಹಾಗೆ ಇದು ಚೆನ್ನೈನ ಕೊಳತ್ತೂರಿನಲ್ಲಿದೆ.

https://youtu.be/rjvSC0I1g78

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read