‘ರಾಮಮಂದಿರ’ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ : ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರು :   ‘ರಾಮಮಂದಿರ’ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ ಮಾಡಲಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು: ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ ಶುಭ ಘಳಿಗೆ ವೇಳೆ ಸುಳ್ಳು ಸುದ್ಧಿ ಹಬ್ಬಿಸುವುದು ರಾಮ ಭಕ್ತರು ಸಂಭ್ರಮಿಸದಂತೆ 144 ಸೆಕ್ಷನ್ ಜಾರಿ ರಾಜ್ಯಾದ್ಯಂತ 22 ರಂದು ವಿದ್ಯುತ್ ಸ್ಥಗಿತ ಮನೆ ಮನೆಯ ಟಿವಿ ಕೇಬಲ್ ಸಂಪರ್ಕ ತಪ್ಪಿಸುವುದು ರಾಮ ಬಂಟ ಹನುಮನ ನಾಡಿನಲ್ಲಿಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿರುವುದು ಅಷ್ಟೇ ಸತ್ಯ! ಎಂದು ಬಿಜೆಪಿ ಕಿಡಿಕಾರಿದೆ.

ಕರ್ನಾಟಕದ ರೈತ ವಿರೋಧಿ ಸರ್ಕಾರ ರೈತರಿಗೆ ನೀಡುವ ಉಪಟಳ ಅತಿಯಾಗುತ್ತಿದೆ. ರೈತರ ಸಹಾಯಧನ, ಸಾಲ ಸೌಲಭ್ಯಕ್ಕೆ ಕೊಕ್ಕೆ ಹಾಕಿದ್ದು ಮಾತ್ರವಲ್ಲದೆ, ರೈತರ ಆತ್ಮಹತ್ಯೆಗಳನ್ನೂ ಸಹ ಕಾಂಗ್ರೆಸ್ ಲೇವಡಿ ಮಾಡಿತ್ತು. ಈಗ ಬರದಿಂದ ಬಸವಳಿಯುತ್ತಿರುವ ರೈತರಿಗೆ ಮೇಲಿಂದ ಮೇಲೆ ಲೋಡ್ ಶೆಡ್ಡಿಂಗ್ ಬರೆ ಹಾಕುತ್ತಿದೆ. ಸಚಿವ ಜಾರ್ಜ್ ಅವರೇ, ನಾಡಿನ ರೈತ ಸಮುದಾಯ ಈ ಪರಿ ಸಂಕಷ್ಟ ಅನುಭವಿಸುತ್ತಿದ್ದರೂ, ನೀವೆಲ್ಲಿ ನಾಪತ್ತೆಯಾಗಿದ್ದೀರಿ!! ರೈತರನ್ನು ಕಂಡರೆ ನಿಮ್ಮ ಸರ್ಕಾರಕ್ಕೆ ಏಕಿಷ್ಟು ದ್ವೇಷ ಎಂಬುದನ್ನು ನೀವೇ ಹೇಳಬೇಕು ಎಂದು  ಬಿಜೆಪಿ ಕಿಡಿಕಾರಿದೆ.

https://twitter.com/BJP4Karnataka/status/1743507614338814330?ref_src=twsrc%5Etfw%7Ctwcamp%5Etweetembed%7Ctwterm%5E1743507614338814330%7Ctwgr%5E035beff6c0b0d34e95f7cecda7caf11754cfdb1e%7Ctwcon%5Es1_&ref_url=https%3A%2F%2Fpublictv.in%2Fbjp-is-serious-allegation-against-congress%2F

https://twitter.com/BJP4Karnataka/status/1743532719144063168

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read