ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು ಶೇಕಡ 0.25 ರಷ್ಟು ಕಡಿಮೆ ಮಾಡಿದೆ. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಇತರೆ ಸಾಲಗಳ ಮೇಲಿನ ಬಡ್ಡಿಯ ಹೊರೆ ತುಸು ಕಡಿಮೆಯಾಗಲಿದೆ.
ರೆಪೊ ದರ ಕಡಿತಗೊಳಿಸುವ ತೀರ್ಮಾನವನ್ನು ಆರ್ಬಿಐ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ(BOB) ರೆಪೊ ದರಕ್ಕೆ ಹೊಂದಿಕೊಂಡ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.25 ರಷ್ಟು ಕಡಿತ ಮಾಡುವುದಾಗಿ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡ ಈ ತೀರ್ಮಾನದಿಂದ ರೆಪೊ ದರಕ್ಕೆ ಹೊಂದಿಕೊಂಡ ಸಾಲದ ಮೇಲಿನ ಬಡ್ಡಿ ದರ ಶೇಕಡ 8.15 ರಿಂದ ಶೇಕಡ 7.90ಕ್ಕೆ ಇಳಿಕೆಯಾಗಲಿದೆ. ಡಿಸೆಂಬರ್ 6ರಿಂದಲೇ ಪರಿಷ್ಕೃತ ಬಡ್ಡಿ ದರ ಅನ್ವಯವಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.
