ರೈತರಿಗೆ ಆರ್ಥಿಕ ನೆರವು ನೀಡಲು ಸಹ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ : ಬಿಜೆಪಿ ಕಿಡಿ

ಬೆಂಗಳೂರು : ರೈತರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.

ಅಧಿಕಾರದ ಅಮಲಿನಿಂದ ಕೊಬ್ಬಿರುವ ಕಾಂಗ್ರೆಸ್ ಸರ್ಕಾರ ಅನ್ನದಾತರಿಗೆ ದ್ರೋಹ ಬಗೆಯುವುದನ್ನೇ ಕಾಯಕ ಮಾಡಿಕೊಂಡಿದೆ. ಎಲೆಚುಕ್ಕೆ ಬಾಧೆಯಿಂದ ಕಂಗೆಟ್ಟ ರಾಜ್ಯದ ಏಳು ಜಿಲ್ಲೆಗಳ ಅಡಿಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಶೇ. 60ರಷ್ಟು ಸಹಾಯಧನ ನೀಡಲು ಈ ವರ್ಷದ ಜೂನ್ ನಲ್ಲೇ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ದಿಕ್ಕೆಟ್ಟ ನೀತಿಗಳಿಂದ ದಿವಾಳಿಯಾಗಿರುವ ಸಿದ್ದರಾಮಯ್ಯ ನವರ ಸರ್ಕಾರ ಮಾತ್ರ ಉಳಿದ ಶೇ.40ರಷ್ಟು ಮೊತ್ತ ಭರಿಸಲು ಮೀನಾಮೇಷ ಎಣಿಸುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಲೂಟಿಕೋರ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಶೇ.40 ಮೊತ್ತವನ್ನು ಭರಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಲು ಎಚ್ಚರಿಸುತ್ತೇವೆ. ಅನ್ನದಾತರಿಗೆ ಅನ್ಯಾಯ ಆಗುವುದನ್ನು ಬಿಜೆಪಿ ಎಂದೂ ಸಹಿಸುವುದಿಲ್ಲ. ರೈತರಿಗೆ ನೆರವು ನೀಡದೆ ಹೋದರೆ ರೈತಾಕ್ರೋಶದ ಹೋರಾಟ ಎದುರಿಸಬೇಕಾಗಲಿದೆ ಎಚ್ಚರ! ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.

https://twitter.com/BJP4Karnataka/status/1832403716135366973

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read