ಬೆಂಗಳೂರು : ಬಂಗಾರ ಧಾಮ”ವನ್ನು ರಾಜ್ಯ ಸರ್ಕಾರ ಪ್ರವಾಸಿ ತಾಣವಾಗಿ ಘೋಷಿಸಿದ್ದು, ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಂಗಾರ ಧಾಮ”ವನ್ನು ಪ್ರವಾಸಿ ತಾಣವಾಗಿ ಘೋಷಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು”ನನ್ನ ಪೂಜ್ಯ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ತಾಯಿ ಶ್ರೀಮತಿ ಶಕುಂತಲಾ ಬಂಗಾರಪ್ಪ ಅವರ ಸ್ಮರಣಾರ್ಥವಾಗಿ ಸೊರಬ ಪಟ್ಟಣದಲ್ಲಿರುವ ನಿರ್ಮಿಸಿರುವ “ಬಂಗಾರ ಧಾಮ”ವನ್ನು ರಾಜ್ಯ ಸರ್ಕಾರ ಪ್ರವಾಸಿ ತಾಣವಾಗಿ ಘೋಷಿಸಿರುವುದು ನನಗೂ ಹಾಗೂ ಬಂಗಾರಪ್ಪನವರ ಅಭಿಮಾನಿಗಳಿಗೆ ಅತ್ಯಂತ ಸಂತೋಷ ಮತ್ತು ಖುಷಿ ತಂದಿದೆ.
ಪ್ರವಾಸಿ ತಾಣವಾಗಿ ಘೋಷಿಸಿದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.ರಾಜ್ಯ ರಾಜಕಾರಣದಲ್ಲಿ ತನ್ನದೇ ಚಾಪನ್ನು ಮೂಡಿಸಿದ್ದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು ಶಾಶ್ವತವಾಗಿ ಜನರ ನಡುವೆಯೇ ಇರಲು “ಬಂಗಾರಧಾಮ”ವನ್ನು ನಿರ್ಮಿಸಿ ಅವರ ಅಭಿಮಾನಿಗಳಿಗೆ ಸಮರ್ಪಿಸಿಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು… ನಿಮ್ಮ ಪ್ರೀತಿ, ಅಭಿಮಾನ ಹಾಗೂ ಬೆಂಬಲ ಸದಾ ನಮ್ಮ ಮೇಲಿರಲಿ…ಎಂದು ಸಚಿವ ಮಧು ಬಂಗಾರಪ್ಪ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಂಗಾರಧಾಮದ ಗೀತಚಿತ್ರ ಬಿಡುಗಡೆ
ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ಕೊಟ್ಟು ಸುಸ್ಥಿರ ಅಭಿವೃದ್ಧಿಯ ನವಯುಗಕ್ಕೆ ಮುನ್ನುಡಿ ಬರೆದ ಸಮಾಜವಾದಿ ಚಿಂತನೆಯ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಚಿರಶಾಂತಿಯ ಸ್ಥಳ “ಬಂಗಾರಧಾಮ”ದ ಗೀತಚಿತ್ರವನ್ನು ಶುಕ್ರವಾರ ನನ್ನ ನಿವಾಸದಲ್ಲಿ ಬಿಡುಗಡೆಗೊಳಿಸಿ, ಬಂಗಾರಪ್ಪನವರ ಸೇವೆ – ಸಾಧನೆಗಳನ್ನು ಸ್ಮರಿಸಿದೆ. ಬಂಗಾರಧಾಮದ ಗೀತಚಿತ್ರ ನೋಡಲು ಈ ಕೆಳಗಿನ ಲಿಂಕ್ ಬಳಸಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
