ಬೆಳಗಾವಿ : ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ‘ಸ್ಟಾರ್ ಏರ್ ವಿಮಾನ’ ಬೆಳಗಾವಿಯಲ್ಲಿ ತುರ್ತು ಭೂ ಸ್ಪರ್ಶವಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಹೌದು. ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನ ಟೇಕ್ ಅಫ್ ಆಗಿದ್ದು, ಮೇಲಕ್ಕೆ ಹಾರುತ್ತಿದ್ದಂತೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್ ಎಚ್ಚೆತ್ತುಗೊಂಡು 15 ನಿಮಿಷ ವಿಮಾನ ಹಾರಾಟ ನಡೆಸಿ ನಂತರ ತುರ್ತು ಭೂ ಸ್ಪರ್ಶ ಮಾಡಿದ್ದಾರೆ.
ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿದ್ದರು , ಅದೃಷವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
You Might Also Like
TAGGED:ಬೆಳಗಾವಿ