ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ದೂರು ದಾಖಲಾಗಿದೆ.
ಆರ್ ಸಿಬಿ, ಡಿಎನ್ ಎ ಕಂಪನಿ, ಕೆ ಎಸ್ ಸಿಎ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಆರ್ ಸಿಬಿ ಆಟಗಾರರನ್ನು ನೋಡಲು ವಿಧಾನಸೌಧದಲ್ಲಿ ಮರ, ಗಿಡಳನ್ನು ಹಾನಿ ಮಾಡಲಾಗಿದೆ. ಕಬ್ಬನ್ ಪಾರ್ಕ್ ನಲ್ಲಿಯೂ ಕಾಲ್ತುಳಿತದಿಂದ ಗಿಡಗಳು ನೆಲಸಮವಾಗಿವೆ ಎಂದು ದೂರು ನೀಡಲಾಗಿದೆ.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಸಿಡಿ ಸಾಕ್ಷಿ ಸಮೇತ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆರ್ ಸಿಬಿ, ಡಿಎನ್ ಎ ಕಂಪನಿ, ಕೆ ಎಸ್ ಸಿಎ ವಿರುದ್ಧ ದೂರು ದಾಖಲಾಗಿದೆ.