BREAKING NEWS: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಘೋರ ದುರಂತ, ಭೀಕರ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಸಾವು

ತಿರುಪತಿ: ತಿರುಪತಿಯ ವೈಕುಂಠ ಏಕಾದಶಿ ಟೋಕನ್ ಕೌಂಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು ನಾಲ್ವರು ಭಕ್ತರ ಸಾವು ಕಂಡಿದ್ದು, ಹಲವರಿಗೆ ಗಾಯಗಳಾಗಿವೆ.

ವೈಕುಂಠ ಏಕಾದಶಿ ಆಚರಣೆಗಾಗಿ ಸ್ಥಾಪಿಸಲಾಗಿದ್ದ ಟೋಕನ್ ಕೌಂಟರ್‌ಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ತಮಿಳುನಾಡಿನ ಸೇಲಂ ಮೂಲದ ಮಹಿಳೆ ಸೇರಿದಂತೆ ನಾಲ್ವರು ಭಕ್ತರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿದ್ದು, ತಿರುಪತಿಯ ಪವಿತ್ರ ಪಟ್ಟಣದಲ್ಲಿ ದುರಂತ ಸಂಭವಿಸಿದೆ.

ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 25 ಕ್ಕೂ ಅಧಿಕ ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಘಟನೆ ನಡೆದಿದ್ದು, ಟಿಟಿಡಿ ಮುಖ್ಯಸ್ಥ ಬಿ.ಆರ್. ಬಾಬು ತುರ್ತು ಸಭೆ ಕರೆದಿದ್ದಾರೆ.

ಸಿಎಂ ನಾಯ್ಡು ಸಂತಾಪ:

ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನ ಟೋಕನ್‌ ಗಾಗಿ ತಿರುಪತಿಯ ವಿಷ್ಣು ನಿವಾಸದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 4 ಭಕ್ತರು ಸಾವನ್ನಪ್ಪಿರುವ ಬಗ್ಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ರಮಕ್ಕೆ ಗಾಯಾಳುಗಳ ರಕ್ಷಣೆ, ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.

ಟಿಕೆಟ್ ವಿತರಣೆ ರದ್ದು:

ತಿರುಪತಿಯ ವಿಷ್ಣು ನಿವಾಸದಲ್ಲಿ ವೈಕುಂಠ ದ್ವಾರ ಸರ್ವ ದರ್ಶನ ಟೋಕನ್ ವಿತರಣೆ ವೇಳೆ ನೂಕುನುಗ್ಗಲು ಕಾಲ್ತುಳಿತ ಉಂಟಾಗಿ ಅವಘಢ ಸಂಭವಿಸಿದೆ.

ವೈಕುಂಠ ದ್ವಾರದರ್ಶನದ ಟಿಕೆಟ್ ಕಾಗಿ ಸಂಜೆಯಿಂದಲೇ ಜನ ಕಾಯುತ್ತಿದ್ದರು. ಅಲಿಪಿರಿ, ಶ್ರೀನಿವಾಸಮ್, ಸತ್ಯನಾರಾಯಣಪುರಂ ಹಾಗೂ ಪದ್ಮಾವತಿಪುರಂ ಭಾಗಗಳಿಂದ ಭಕ್ತರು ಜಮಾಯಿಸಿದ್ದರಿಂದ ಭಾರಿ ನೂಕು ನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ. ಕಾಲ್ತುಳಿತ ಹಿನ್ನೆಲೆ ವೈಕುಂಠ ದ್ವಾರದರ್ಶನ ಟಿಕೆಟ್ ವಿತರಣೆ ರದ್ದು ಮಾಡಲಾಗಿದೆ. ನಾಳೆ ಮುಂಜಾನೆಯಿಂದ ಟಿಕೆಟ್ ವಿತರಿಸಲು ಟಿಟಿಡಿ ತೀರ್ಮಾನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read